ಬೆಂಗಳೂರು : ಡ್ರಗ್ಸ್ ಪೆಡ್ಲರ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 20 ಲಕ್ಷ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.
ನಗರದ ರಾಮಮೂರ್ತಿನಗರದ ಮನೆಯಲ್ಲಿ ಶೋಧಕಾರ್ಯ ನಡೆಸಿದ್ದು, ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಪೋಲ್ಯಾಂಡ್ ಸೇರಿ ವಿವಿಧ ದೇಶಗಳಿಂದ ಪೋಸ್ಟ್ ಮೂಲಕ ಗೋವಾಗೆ ಡ್ರಗ್ಸ್ ತರಿಸಿಕೊಂಡು ಬಳಿಕ ಸ್ನೇಹಿತನ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದ ಎಂಬ ಮಾಹಿತಿ ದಾಳಿ ವೇಳೆ ಲಭ್ಯವಾಗಿದೆ. ಸದ್ಯ ಸಿಸಿಬಿ ಅಧಿಕಾರಿಗಳು ನೈಜೀರಿಯಾ ಪ್ರಜೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.










