ನಟ ಪುನೀತ್ ಸಾವಿನ ಸುದ್ದಿ ನೋಡಿ ಅಭಿಮಾನಿಗೆ ಹೃದಯಾಘಾತ…

93
firstsuddi

ಚಾಮರಾಜನಗರ : ಪುನೀತ್ ಅಭಿಮಾನಿಯೋರ್ವ ಪುನೀತ್ ಸಾವಿನ ಸುದ್ಧಿ ನೋಡುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ನಿನ್ನೆ ನಡೆದಿದೆ.

ಮುನಿಯಪ್ಪ(28) ಮೃತ ಅಪ್ಪು ಅಭಿಮಾನಿ. ಜಮೀನಿನಿಂದ ಊಟಕ್ಕೆ ಬಂದಿದ್ದ ಈತ ಟಿವಿ ಹಾಕಿದ್ದಾನೆ. ಈ ವೇಳೆ ಪುನೀತ್ ಸಾವಿನ ಸುದ್ದಿ ಪ್ರಸಾರವಾಗಿದ್ದು, ನೆಚ್ಚಿನ ನಟನ ಸಾವಿನ ಸುದ್ದಿ ನೋಡುತ್ತಿದ್ದಂಯೇ ಮುನಿಯಪ್ಪ ಕುಸಿದು ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾನೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸ್ಥಳೀಯರು ಮೃತ ಮುನಿಯಪ್ಪ ಅಪ್ಪಟ ಪುನೀತ್ ರಾಜ್ಕುಮಾರ್ ಅಭಿಮಾನಿಯಾಗಿದ್ದು, ಇಲ್ಲಿನ ಚಿತ್ರಮಂದಿರಗಳು ಚೆನ್ನಾಗಿರುವುದಿಲ್ಲವೆಂದು ಬೆಂಗಳೂರಿಗೆ ತೆರಳಿ ಅಲ್ಲೇ ಅಪ್ಪು ಚಿತ್ರಗಳನ್ನು ಎರಡು ಮೂರು ಶೋ ಗಳನ್ನು ನೋಡಿ ಬರುತ್ತಿದ್ದ. ದಿಢೀರ್ ಮೃತಪಟ್ಟ ವಿಚಾರ ತಿಳಿದು ಈ ಅವಘಡ ಸಂಭವಿಸಿದೆ ಎಂದಿದ್ದಾರೆ.