2 ವರ್ಷದ ಮಗುವಿನ ಮೇಲೆ ಲೈಂಗಿಕ ಕಿರುಕುಳ – ಆರೋಪಿ ಅರೆಸ್ಟ್…

151
firstsuddi

ಮಂಗಳೂರು : ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿಹಾರ್ ಮೂಲದ ಚಂದನ್ (38 ) ಬಂಧಿತ ಆರೋಪಿ. ನಿನ್ನೆ ಸಂಜೆ ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ನಗರದ ಹೊಯಿಗೆ ಬಜಾರ್ ನಲ್ಲಿರುವ ಫಿಶ್ ಕಟ್ಟಿಂಗ್ ಯಾರ್ಡ್ ನಲ್ಲಿ ಸುಮಾರು 30 ಬಿಹಾರ್ ಮೂಲದ ಕುಟುಂಬದ 75 ಜನ ವಾಸಿಸುತ್ತಿದ್ದಾರೆ.

ಆರೋಪಿ ಚಂದನ್ ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಮಗುವನ್ನು ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿ ಉಪ್ಪು ನೀರಿನ ಟ್ಯಾಂಕ್ ಗೆ ಬಿಸಾಡಿ ಹೋಗಿದ್ದ. ಬಳಿಕ ಪೋಷಕರು ಹುಡುಕಾಟ ನಡೆಸಿದಾಗ ರಾತ್ರಿ 9 ಗಂಟೆಗೆ ಉಪ್ಪು ನೀರು ಶೇಖರಣೆಗೊಳ್ಳುವ ಟ್ಯಾಂಕ್ ನಲ್ಲಿ ಮಗು ಪತ್ತೆಯಾಗಿದೆ. ಸದ್ಯ ಮಗುವನ್ನು ಇನ್ಪೋಸಿಸ್ ಅತ್ಯಾಧುನಿಕ ಮಕ್ಕಳ ಆರೋಗ್ಯ ರಕ್ಷಣಾ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.