ಶಿವಮೊಗ್ಗ : ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡುವ ಮೂಲಕ ನಗರದ ಜನತೆ ಪುನೀತ್ ಅವರ ಮೇಲಿನ ಅಭಿಮಾನವನ್ನು ವಿಭಿನ್ನವಾಗಿ ಮೆರೆದಿದ್ದಾರೆ.
ನಗರದ ಸ್ಥಳಿಯರು ಸುಮಾರು 1 ಕಿ.ಮೀ ಉದ್ದದ ಲಕ್ಷ್ಮೀ ಟಾಕೀಸ್ ಹತ್ತಿರದ ಚಾನೆಲ್ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಿ, ಬೋರ್ಡ್ ಕೂಡ ನೆಟ್ಟಿದ್ದಾರೆ. ಅಲ್ಲದೇ ಮಹನಾಗರ ಪಾಲಿಕೆಗೆ ಈ ರಸ್ತೆಯನ್ನು ಅಧಿಕೃತಗೊಳಿಸಲು ಒತ್ತಾಯಿಸಿದ್ದಾರೆ. ಜನತೆಯ ಈ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.










