ತಾಯಿ – ಮಗು ಮೇಲೆ ಹರಿದ ಕಾರು – ಇಬ್ಬರು ಸಾವು…

99
firstsuddi

ವಿಜಯಪುರ : ಹೆದ್ದಾರಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ತಾಯಿ ಹಾಗೂ ಮಗುವಿನ ಮೇಲೆ ಕಾರು ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತಿಡಗುಂದಿ ಬಳಿಯ ಎನ್ ಎಚ್ 50 ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಗೀತಾ ಪೂಜಾರಿ(35) ಹಾಗೂ ಆಕೆಯ ಮಗ ಮಂಜು ಪೂಜಾರಿ(4) ಎಂದು ಗುರುತಿಸಲಾಗಿದೆ. ಗೀತಾ ಪೂಜಾರಿ ಮತ್ತು ಮಂಜು ಪೂಜಾರಿ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕೆಎ 28 – ಪಿ 0922 ನಂಬರಿನ ಕಾರು ಇವರಿಬ್ಬರ ಮೇಲೆ ಹರಿದಿದ್ದು, ಈ ಪರಿಣಾಮ ತಾಯಿ, ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಸ್ಥಳಿಯರು ಕಾರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಾಲಕನ ಬೇಜವಾಬ್ದಾರಿಯಿಂದ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ನ್ಯಾಯಕ್ಕಾಗಿ ಧರಣಿ ನಡೆಸಿದ್ದಾರೆ.