ಚಿಕ್ಕಮಗಳೂರು : ಶಿಕ್ಷಕಿಯಾಗಿ ಸಲ್ಲಿಸಿರುವ ಸೇವೆ ಅತ್ಯಂತ ತೃಪ್ತಿ ತಂದಿದೆ : ಬಿ.ಆರ್.ಗೀತಾ.

73
firstsuddi

ಚಿಕ್ಕಮಗಳೂರು : ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಆಜಾದ್‍ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಯ ಮುಖ್ಯಶಿಕ್ಷಕಿ ಬಿ.ಆರ್.ಗೀತಾ ಅವರಿಗೆ ನಗರದ ವಿದ್ಯಾಭಾರತಿ ಸಭಾಂಗಣದಲ್ಲಿ ಇಂದು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.

ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಜಿಲ್ಲಾ ಮತ್ತು ತಾಲ್ಲೂಕು ಸಂಘ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ವಿವಿಧ ಶಿಕ್ಷಕ ಸಂಘಗಳು, ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಗೀತಾ ಅವರಿಗೆ ಮಂಗಳದ್ರವ್ಯಗಳನ್ನು ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಸರಳ ಸಜ್ಜನಿಕೆ, ನೇರ ನಡೆ, ನುಡಿಗೆ ಗೀತ ಅವರು ಹೆಸರಾಗಿದ್ದರು. ಯಾರ ಮನಸ್ಸನ್ನೂ ನೋಯಿಸದ ಸ್ವಭಾವ ಹೊಂದಿದ್ದರು. ಮಾತೃ ಹೃದಯಿಯಾಗಿದ್ದರು ಎಂದರು.
ಎಲ್ಲರಿಗೂ ಸದಾ ಮಾರ್ಗದರ್ಶಕರಾಗಿದ್ದ ಗೀತಾ ಅವರು ಬಹಳ ಕಷ್ಟದಿಂದ ಮೇಲೆ ಬಂದು ಶಿಕ್ಷಕಿ ಮತ್ತು ಮುಖ್ಯಶಿಕ್ಷಕಿಯಾಗಿ ಹಲವು ಸಮಸ್ಯೆಗಳ ನಡುವೆಯೂ ಸಾವಿರಾರು ಮಕ್ಕಳಿಗೆ ವಿದ್ಯಾದಾನದ ಮೂಲಕ ಅವರಿಗೆ ಬದುಕನ್ನು ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಇ.ಲೋಕೇಶ್ವರಾಚಾರ್ ಮಾತನಾಡಿ ಆಜಾದ್‍ಪಾರ್ಕ್ ಶಾಲೆಯ ಅಭಿವೃದ್ದಿಗೆ ಗೀತಾ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಆರ್.ಗೀತ ಶಿಕ್ಷಕಿಯಾಗಿ ತಾವು ಸಲ್ಲಿಸಿರುವ ಸೇವೆ ತಮಗೆ ಅತ್ಯಂತ ತೃಪ್ತಿ ಮತ್ತು ಹೆಮ್ಮೆ ತಂದಿದೆ. ಆಜಾದ್‍ಪಾರ್ಕ್ ಶಾಲೆಯ ನಿರ್ವಹಣೆ ಮತ್ತು ಅಭಿವೃಧ್ದಿಗೆ ದೈಹಿಕ ಶಿಕ್ಷಕ ಎಸ್.ಇ.ಲೋಕೇಶ್ವರಾಚಾರ್ ಅವರ ನಿರಂತರ ಸಹಕಾರ ಮತ್ತು ಪ್ರೋತ್ಸಾಹವೇ ಕಾರಣ ಅವರಂತಹ ಸಹದ್ಯೋಗಿಗಳಿದ್ದರೆ ಯಾವ ಶಾಲೆ ಬೇಕಾದರೂ ಅಭಿವೃಧ್ದಿಯಾಗುತ್ತದೆ ಎಂದರು.
ತಮ್ಮ ಸೇವಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಉಪಾಧ್ಯಕ್ಷೆ ನೀಲಮ್ಮ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಇಒ ಜಯಣ್ಣ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಸಿದ್ದರಾಜಪ್ಪ, ಜಯರಾಂ, ಅರುಣಕುಮಾರಿ, ಉದಯಕುಮಾರ್, ಸಾಹಿತಿ ಡಾ|| ಬೆಳವಾಡಿ ಮಂಜುನಾಥ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್, ತಾಲ್ಲೂಕು ಸಹ ಕಾರ್ಯದರ್ಶಿ ಜಾನಕಮ್ಮ, ಜಿಲ್ಲಾ ಉಪಾಧ್ಯಕ್ಷ ಗಣೇಶ್‍ಮೂರ್ತಿ, ಅಣ್ಣಾನಾಯಕ್, ಭೀಮಪ್ಪ ಹೂಗಾರ್, ರೂಬಿನ್‍ಮೋಸಸ್, ಪುಂಡರೀಕ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ವೆಂಕಟೇಶ್ ಪ್ರಸಾದ್, ಅಣ್ಣಾನಾಯಕ್ ಉಪಸ್ಥಿತರಿದ್ದರು.