ಕೊಪ್ಪಳ : ಮುಖ್ಯಮಂತ್ರಿ ಬದಲಾವಣೆ ನೂರಕ್ಕೆ ನೂರು ಆಗುತ್ತೆ ಎಂದು ಕಾಂಗ್ರೆಸ್ ಮಾಜಿ ಸಚಿವ ಶಿವರಾಜ್ ತಂಗಡಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವರಿ ಅಂತ್ಯಕ್ಕೆ ಬಸವರಾಜ ಬೊಮ್ಮಾಯಿ ಅವರ ಅಧಿಕಾರ ಹೋಗುತ್ತೆ. ಬಹಳ ಸ್ಪಷ್ಟ ಮಾಹಿತಿಗಳು ನಮಗೆ ಬರ್ತಿವೆ. ಇನ್ನೂ ಒಂದೂವರೆ ವರ್ಷದಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗ್ತಾರೆ. ಈ ರಾಜ್ಯಕ್ಕೆ ಇನ್ನು ಇಬ್ಬರು ಮುಖ್ಯಮಂತ್ರಿ ಬರ್ತಾರೆ. ಸಿಎಂ ಬದಲಾವಣೆ ನೂರಕ್ಕೆ ನೂರು ಆಗುತ್ತೆ. ಬೊಮ್ಮಾಯಿ ಅವರನ್ನ ಬಿಟ್ಟು ಇನ್ನು ಒಬ್ಬರು ಸಿಎಂ ಆಗ್ತಾರೆ. ಬಿಜೆಪಿ ಸರ್ಕಾರದಲ್ಲಿ ಹಿಂದೆ ಮೂರು ಜನ ಸಿಎಂ ಆಗಿದ್ದರು. ಈ ಬಾರಿ ನಾಲ್ವರು ಆಗಬಹುದು. ಅವರು ಆಡಳಿತ ಮಾಡೋಕೆ ಸಮರ್ಥರಿಲ್ಲ ಎಂದು ಟೀಕಿಸಿದರು.
ಬೀಟ್ ಕಾಯಿನ್ ವಿಚಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಾತಾಡ್ತಾರೆ. ಬೀಟ್ ಕಾಯಿನ್ ವಿಚಾರದಲ್ಲಿ ಅನೇಕ ಚರ್ಚೆ ಆಗ್ತಿವೆ. ದೂರು ದಾಖಲಾಗಿದ್ದ ಪ್ರತಿ ಕೊಡಿ ಎಂದು ನಮ್ಮ ನಾಯಕರು ಕೇಳ್ತೀದಾರೆ. ಅದರ ಬಗ್ಗೆ ಹೆದರಿಕೆ ಇರೋದಕ್ಕೆ ಬಿಜೆಪಿ ಅವರು ಕೊಡ್ತಿಲ್ಲ. ಆರೋಪ ಮಾಡೋರು ಸಾಕ್ಷಿ ಕೊಡಬೇಕು ಅಂದ್ರೆ ಸರ್ಕಾರ ಯಾಕೆ ಬೇಕು? ಎಂದು ಕಿಡಿಕಾರಿದರು.










