ಹುಬ್ಬಳ್ಳಿ : ಎಟಿಎಂನಲ್ಲಿ ಹಣ ಕಳ್ಳತನ ಮಾಡಲು ಯತ್ನಿಸಿದ್ದ ಆರೋಪಿಯನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 13 ರಂದು ತಡರಾತ್ರಿ ನಗರದ ನ್ಯೂ ಕಾಟನ್ ಮಾರ್ಕೆಟ್ ನ ಎಕ್ಸಿಸ್ ಬ್ಯಾಂಕ್ ಎಟಿಎಂಗೆ ರಾಡ್ ಹಿಡಿದು ನುಗ್ಗಿದ್ದ ವ್ಯಕ್ತಿಯೊರ್ವ ಎಟಿಎಂ ಮಷಿನ್ ಗೆ ಅಳವಡಿಸಿದ್ದ ವೈರ್ ಗಳನ್ನು ಕಿತ್ತು ಕಳವಿಗೆ ಮುಂದಾಗಿದ್ದ. ಇದನ್ನು ಸ್ಥಳೀಯರು ಗಮನಿಸಿದ ಹಿನ್ನಲೆ ಬರಿಗೈಲಿ ವಾಪಸಾಗಿದ್ದ. ಈ ಕುರಿತು ಬ್ಯಾಂಕ್ ಅಧಿಕಾರಿಗಳು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇನ್ಸ್ ಸ್ಪೆಕ್ಟರ್ ರವಿಚಂದ್ರ ಡಿ.ಬಿ. ಹಾಗೂ ಸಿಬ್ಬಂದಿ ಎಟಿಎಂನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆರೋಪಿಯ ಚಹರೆ ಆಧಾರದ ಮೇಲೆ ಹುಡುಕಾಟ ಆರಂಭಿಸಿ ಕೊನೆಗೂ ಆರೋಪಿಯನ್ನು ಬಂಧಿಸಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.










