ಮುಂಬೈ : ವಿವಾಹಿತ ಅಪ್ರಾಪ್ತೆ ಮೇಲೆ ಕಳೆದ ಆರು ತಿಂಗಳಿನಿಂದ 400 ಮಂದಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿ ತಾಯಿಯನ್ನು ಕಳೆದುಕೊಂಡಿದ್ದಳು. ಹೀಗಾಗಿ ತಂದೆ ಮಗಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕೆಂದು, ವರನನ್ನು ಹುಡುಕಿ ಮದುವೆ ಮಾಡಿದ್ದರು. ಆಕೆಯ ಗಂಡ 6 ತಿಂಗಳು ಕೆಲಸ ಟ್ರೈನಿಂಗ್ ಹಿನ್ನೆಲೆ ಬೇರೆ ಊರಿಗೆ ತೆರಳಿದ್ದ. ಈ ಮಧ್ಯೆ ಆಕೆ ಯಾವುದೋ ಜಾಲದಲ್ಲಿ ಸಿಲುಕಿ 400 ಮಂದಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಅಪ್ರಾಪ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ. ಪೊಲೀಸರು ಕೂಡ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬೀಡ್ ಪೊಲೀಸ್ ವರಿಷ್ಠಾಧಿಕಾರಿ ರಾಜ ರಾಮಸಾಮಿ ಮಾಹಿತಿ ನೀಡಿದ್ದಾರೆ.










