ಬೆಂಗಳೂರು : ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುವುದರಿಂದ ಜೆಡಿಎಸ್ ಬೆಳಗ್ಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಈಗಾಗಲೇ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿದ್ದು, ಉಳಿದ ಎಲ್ಲ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕದೇ ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.
7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂತಿದೆ:
• ಮಂಡ್ಯ ಕ್ಷೇತ್ರ-ಅಪ್ಪಾಜಿಗೌಡ
• ಹಾಸನ ಕ್ಷೇತ್ರ-ಸೂರಜ್ ರೇವಣ್ಣ
• ಮೈಸೂರು ಕ್ಷೇತ್ರ-ಸಿ.ಎನ್.ಮಂಜೇಗೌಡ
• ತುಮಕೂರು ಕ್ಷೇತ್ರ-ಅನಿಲ್ ಕುಮಾರ್
• ಬೆಂಗಳೂರು ಗ್ರಾಮಾಂತರ-ಹೆಚ್.ಎಂ.ರಮೇಶ್ ಗೌಡ
• ಕೋಲಾರ ಕ್ಷೇತ್ರ-ವಕ್ಕಲೇರಿ ರಾಮು
• ಕೊಡಗು ಕ್ಷೇತ್ರ-ಹೆಚ್.ಯು.ಇಸಾಕ್ ಖಾನ್










