ಜನಸಾಮಾನ್ಯರಿಗೆ ‘ದರ’ ಸಿಡಿಲು – ಗಗನಕ್ಕೇರಿದ ಟೊಮೆಟೋ ಬೆಲೆ!

76
firstsuddi

ಬೆಂಗಳೂರು : ಭಾರೀ ಮಳೆಯಿಂದಾಗಿ ಜನ ಜೀವನ ತತ್ತರಿಸಿ ಹೋಗಿದೆ. ಇದೀಗ ಟೊಮೆಟೋ ಬೆಲೆ ದಿಢೀರನೇ ಗಗನಕ್ಕೆ ಏರಿದ್ದು, ಇದರಿಂದಾಗಿ ಜನಸಾಮಾನ್ಯರು ಆತಂಕಕ್ಕೊಳಗಾಗಿದ್ದಾರೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಮಾರುಕಟ್ಟೆಗೆ ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು ಬೇಡಿಕೆ ಜಾಸ್ತಿಯಿದೆ. ಹೀಗಾಗಿ ಬೆಲೆ ಭಾರೀ ಏರಿಕೆಯಾಗಿದೆ. ಅದರಲ್ಲೂ ಟೊಮೆಟೋ ಬೆಲೆ ದಿನೇ ದಿನೇ ಅಧಿಕಗೊಳ್ಳುತ್ತಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರತಿ ಕೆಜಿಗೆ ಟೊಮೆಟೋ ಬೆಲೆ 90-100 ರೂ.ಗಳಾಗಿದ್ದು, ಹಾಪ್ ಕಾಮ್ಸ್ ನಲ್ಲಿ ಒಂದು ಕೆಜಿ ಟೊಮೆಟೋಗೆ 90 ರೂ.ಯಿದ್ದರೆ, ಆನ್ ಲೈನ್ ನಲ್ಲಿ ಖರೀದಿಸುವವರಿಗೆ 98 ರೂಪಾಯಿ ಆಗಿದೆ.