ಕಾಲುವೆಯಲ್ಲಿ ಕಾಲು ತೊಳೆಯಲು ಹೋಗಿ ನೀರುಪಾಲಾದ ವಿದ್ಯಾರ್ಥಿ.

57
firstsuddi

ಮೈಸೂರು : ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋಗಿ ವಿದ್ಯಾರ್ಥಿಯೋರ್ವ ನೀರುಪಾಲಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ.

ವೇಣುಗೋಪಾಲ್ (19) ಮೃತ ವಿದ್ಯಾರ್ಥಿ.ನಂಜನಗೂಡು ತಾಲೂಕಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ ಹುಲ್ಲಹಳ್ಳಿ ಬಳಿ ಇರುವ ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋದಾಗ ಆಕಸ್ಮಿಕವಾಗಿ ಜಾರಿ ಕಾಲುವೆಗೆ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ರಕ್ಷಿಸಿ ಆತನನ್ನು ಆಸ್ಪತ್ರೆ ಕರೆದುಕೊಂಡು ಹೋದರೂ ಕೂಡ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.