ದಕ್ಷಿಣ ಆಫ್ರಿಕಾದಿಂದ ಬಂದು ನಾಪತ್ತೆಯಾಗಿದ್ದ 10 ಪ್ರಯಾಣಿಕರ ಪೈಕಿ 9 ಮಂದಿ ಪತ್ತೆ…

101
firstsuddi

ಬೆಂಗಳೂರು : ದಕ್ಷಿಣ ಆಫ್ರಿಕಾದಿಂದ ಆಗಮಿಸಿ ನಾಪತ್ತೆಯಾಗಿದ್ದ 10 ಮಂದಿಯಲ್ಲಿ 9 ಪ್ರಯಾಣಿಕರು ಪತ್ತೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ 66 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇನ್ನೂ ಅದೇ ವಿಮಾನದಲ್ಲಿ 57 ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದರು. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹಲವರ ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಉಳಿದ 10 ಮಂದಿ ಕಾಣೆಯಾಗಿದ್ದರು. ಅವರು ಏರ್ ಪೋರ್ಟ್ ನಲ್ಲಿ ನೀಡಿದ್ದ ವಿಳಾಸ ಪತ್ತೆಯಾಗಿಲ್ಲ. ಅಲ್ಲದೇ ಅವರ ಫೋನ್ ಗಳಿಗೆ ಕರೆ ಮಾಡಿದರೆ ಸ್ವಿಚ್ಡ್ ಆಫ್ ಬರುತ್ತಿದೆ ಎಂದು ಸಚಿವರು ಹೇಳಿದ್ದರು. ಈ ವೇಳೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದರು. ಇಂದು 9 ಮಂದಿ ಪತ್ತೆಯಾಗಿದ್ದು, ಮತ್ತೊಬ್ಬನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.