ಶಿಕ್ಷಕನ ತಲೆಗೆ ಬಕೆಟ್ ಹಾಕಿ ಪುಂಡಾಟ ಮೆರೆದ ವಿದ್ಯಾರ್ಥಿಗಳು!

78
firstsuddi

ದಾವಣಗೆರೆ : ತರಗತಿಗೆ ಪಾಠ ಮಾಡಲು ಬಂದ ಶಿಕ್ಷಕನ ತಲೆಗೆ ಬಕೆಟ್ ಹಾಕಿ, ಹಲ್ಲೆ ನಡೆಸಿ ವಿದ್ಯಾರ್ಥಿಗಳು ಪುಂಡಾಟಿಕೆ ನಡೆಸಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಹೈಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. ಹಿಂದಿ ಪಾಠ ಮಾಡಲು ಶಿಕ್ಷಕ ಪ್ರಕಾಶ್ ಬೋಗೇರ್ ಅವರು ತರಗತಿಗೆ ಬಂದಿದ್ದಾರೆ. ಆದರೆ ಶಿಕ್ಷಕ ಪಾಠ ಮಾಡುತ್ತಿರುವುದನ್ನು ಕೇಳಿಸಿಕೊಳ್ಳದ ನಾಲ್ಕೈದು ವಿದ್ಯಾರ್ಥಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ. ವಿದ್ಯಾರ್ಥಿಗಳ ಪುಂಡತನದ ದೃಶ್ಯವನ್ನು ತರಗತಿಯಲ್ಲಿದ್ದ ಸಹ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಪುಂಡ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.