ಚಪ್ಪಲಿ ಖರೀದಿಸಲು ಹೋದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ – ಅಂಗಡಿ ಮಾಲೀಕನ ಬಂಧನ…

84
firstsuddi

ಮಂಗಳೂರು: ಚಪ್ಪಲಿ ಖರೀದಿಸಲು ಚಪ್ಪಲಿ ಅಂಗಡಿಗೆ ಹೋದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಂಗಡಿ ಮಾಲೀಕನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಅಂಗಡಿ ಮಾಲೀಕ ಸಂಶುದ್ದೀನ್ ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯಲ್ಲಿರುವ ಸಂಶುದ್ದೀನ್ ಪಾದರಕ್ಷೆ ಮಳಿಗೆಗೆ ಮಹಿಳೆಯೊಬ್ಬರು ಚಪ್ಪಲಿ ಖರೀದಿಸಲೆಂದು ಹೋಗಿದ್ದರು. ಈ ವೇಳೆ ಅಚಿಡಿ ಮಾಲೀಕ ಸಂಶುದ್ದೀನ್ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದಾನೆ. ಆದರೆ ಅವರಿಗೆ ಯಾವ ಪಾದರಕ್ಷೆಯೂ ಇಷ್ಟವಾಗಲಿಲ್ಲ. ನಂತರ ಸಂಶುದ್ದೀನ್ ಮಹಿಳೆಗೆ ಬೇರೆ ಚಪ್ಪಲಿಗಳನ್ನು ತೋರಿಸುವುದಾಗಿ ಹೇಳಿ ಅಂಗಡಿಯ ಒಳಗಿದ್ದ ಇನ್ನೊಂದು ಕಂಪಾರ್ಟ್ ಮೆಂಟ್ ಗೆ ಕರೆಸಿಕೊಂಡು ತನ್ನ ಭುಜ ಹಾಗೂ ಎದೆಯ ಭಾಗಕ್ಕೆ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಮುಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಹಿಳೆ ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.