ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಥ್ಲೀಟ್ ಪೂವಮ್ಮ.

121
firstsuddi

ಮಂಗಳೂರು : ಕರ್ನಾಟಕದ ಅಥ್ಲೀಟ್ ಹಾಗೂ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಪೂವಮ್ಮ ಅವರು ಕೇರಳದ ಅಥ್ಲೀಟ್ ಜಿತಿನ್ ಪೌಲ್ ಜೊತೆ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್ ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ವಧುವರರ ತಂದೆ – ತಾಯಿ, ಕುಟುಂಬವರ್ಗ ಮತ್ತು ಬಂಧುಮಿತ್ರರು ಪಾಲ್ಗೊಂಡಿದ್ದರು. ಜ. 1ರಂದು ಕೇರಳದ ತ್ರಿಶೂರಿನಲ್ಲಿ ವಿವಾಹ ಪ್ರಯುಕ್ತ ಕಾರ್ಯಕ್ರಮ ನಡೆಯಲಿದೆ.

ಕೊಡಗು ಮೂಲದ 31 ವರ್ಷದ ಪೂವಮ್ಮ ಒಲಿಂಪಿಕ್ಸ್‌ನಲ್ಲಿ 2 ಬಾರಿ ಮತ್ತು ಅಂತರಾಷ್ಟ್ರೀಯ ಅಥ್ಲೀಟ್ ಕೂಟದಲ್ಲಿ 4 ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2014ರ ಇಂಚೋನ್ ಏಷ್ಯಾಡ್‍ನಲ್ಲಿ 1 ಚಿನ್ನ, 1 ಕಂಚು ಮತ್ತು 2018ರ ಜಕಾರ್ತ್ ಏಷ್ಯಾಡ್‍ನಲ್ಲಿ 2 ಚಿನ್ನ ಜಯಿಸಿದ್ದರು.