ಮಲೆ ಮಾದಪ್ಪನಿಗೆ ಹರಿದು ಬಂತು ಕೋಟಿ ಕೋಟಿ ಹಣ…

69
firstsuddi

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದ್ದು, ಬರೋಬ್ಬರಿ 2.27 ಕೋಟಿ ರೂ. ಸಂಗ್ರಹವಾಗಿದೆ.

ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೂ ನಡೆದಿದ್ದು, ಬರೋಬ್ಬರಿ 2,27,66,834 ರೂ. ನಗದು ಸಂಗ್ರಹವಾಗಿದೆ. ಜೊತೆಗೆ 59 ಗ್ರಾಂ ಚಿನ್ನ, 3.8 ಕೆಜಿ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ಮಾದಪ್ಪನಿಗೆ ಅರ್ಪಿಸಿದ್ದಾರೆ. ಅಕ್ಟೋಬರ್ ನಲ್ಲಿ ಸಹ 2.62 ಕೋಟಿ ರೂಪಾಯಿ ಸಂಗ್ರಹವಾಗಿತ್ತು.