ಕೊಡಲಿಯಿಂದ ಹೊಡೆದು ಸೊಸೆಯನ್ನೇ ಕೊಂದ ಮಾವ!

83
firstsuddi

ಹೈದರಾಬಾದ್ : ಕೊಡಲಿಯಿಂದ ಹೊಡೆದು ಸೊಸೆಯನ್ನು ಮಾವ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮಂಚೇರಿಯಲ್ ನಲ್ಲಿ ನಡೆದಿದೆ.

ಲಿಂಗಣ್ಣಪೇಟೆಯ ನಿವಾಸಿಗಳಾದ ಸಾಯಿಕೃಷ್ಣ, ಸೌಂದರ್ಯ ಪ್ರೀತಿಸುತ್ತಿದ್ದರು. ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ಇವರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ. ಆದರೆ, ಕಳೆದ ಐದು ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ ಕೆಲ ದಿನಗಳ ನಂತರ ಊರಿಗೆ ಬಂದು ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಮದುವೆಯಾದ ಬಳಿಕ ಸಾಯಿಕೃಷ್ಣ ಕುಡಿತದ ಚಟಕ್ಕೊಳಗಾಗಿದ್ದು, ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗಂಡನ ನಿಧನದ ಬಳಿಕ ಸೌಂದರ್ಯ ತಾಯಿಯ ಮನೆಗೆ ಬಂದಿದ್ದಾಳೆ. ಮಗನ ಸಾವಿಗೆ ಹೆಂಡತಿ ಸೌಂದರ್ಯ ಕಾರಣವೆಂದು ಸಾಯಿಕೃಷ್ಣ ತಂದೆ ಸೊಸೆ ಉಳಿದುಕೊಂಡಿದ್ದ ಸ್ಥಳಕ್ಕೆ ಹೋಗಿ ಜಗಳವಾಡಿದ್ದಾನೆ. ಈ ವೇಳೆ ಸೌಂದರ್ಯ ತಂದೆ ಲಕ್ಷ್ಮಯ್ಯ ತಡೆಯಲು ಮುಂದಾಗಿದ್ದು, ಆತನಿಗೆ ಗಂಭೀರವಾಗಿ ಗಾಯಗೊಳಿಸಿದ್ದು, ಸೌಂದರ್ಯಗೆ ಕೊಡಲಿಯಿಂದ ಹೊಡೆದು ಪರಾರಿಯಾಗಿದ್ದಾನೆ. ಸ್ಥಳದಲ್ಲೇ ಕುಸಿದು ಬಿದ್ದು, ಆಕೆ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಗೆ ದಾಖಲು ಮಾಡಿದ ವೇಳೆ ಲಕ್ಷ್ಮಯ್ಯ ಕೂಡ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.