ಮಾತು ಎತ್ತಿದ್ರೆ ಹೊಡಿ.. ಬಡಿ.. ಕಡಿ.. ಅಂತಾನೆ : ಸಂಸದ ಬಸವರಾಜು, ಬೈರತಿ ಗುಸು-ಗುಸು…

81
firstsuddi

ತುಮಕೂರು : ನಗರದಲ್ಲಿ ಸುದ್ದಿಗೋಷ್ಠಿ ವೇಳೆ ಸಂಸದ ಜಿ.ಎಸ್ ಬಸವರಾಜು ಹಾಗೂ ಸಚಿವ ಬೈರತಿ ಬಸವರಾಜ್ ಅವರು ಗುಸು, ಗುಸು ಎಂದು ಮಾತನಾಡಿಕೊಂಡಿದ್ದಾರೆ. ಈ ವೇಳೆ ಸುಮ್ಮನೀರು ಅಮೇಲೆ ಮಾತನಾಡೋಣ ಅಂತಾ ಸಚಿವ ಭೈರತಿ ಬಸವರಾಜ್ ಹೇಳಿದರೂ ಸಂಸದ ಬಸವರಾಜು ಸಚಿವ ಮಾಧುಸ್ವಾಮಿ ವಿರುದ್ಧ ಆರೋಪಗಳ ಸುರಿಮಳೆಯೇ ಸುರಿಸಿದ್ದಾರೆ.

ಈ ನನ್ನ ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ. ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ. ಕೆಟ್ಟ ಸೂ.. ಮಗ. ನಮ್ಮ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟಿದ್ದಾನೆ. ಒಂದು ಸೀಟ್ ಬರಲ್ಲ, ಮಾತು ಎತ್ತಿದ್ರೆ ಹೊಡಿ.. ಬಡಿ.. ಕಡಿ.. ಅಂತಾನೆ. ಹೆಂಡ್ತಿ ಸೀರೆ ಒಗೆಯೋಕೆ ಲಾಯಕ್ ನೀನು ಅಂತಾ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಹೇಳ್ತಾನೆ.

ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದಿದ್ದಾನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ. ನಿಮ್ಮ ಇಲಾಖೆಗೆ ಬಂದು ಹೇಳಿದರೇ ತಲೆಕೆಡಿಸಕೊಳ್ಳಬೇಡಿ. ಎಂದು ಹೆಸರೇ ಹೇಳದೇ ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಸಂಸದ ಬಸವರಾಜು ವಾಗ್ದಾಳಿ ನಡೆಸಿದ್ದಾರೆ.