ಚಿತ್ರದುರ್ಗ : ಕೊರೊನಾ ಲಸಿಕೆ ಬೇಡ ಎಂದು ಯುವಕನೋರ್ವ ಮನೆ ಏರಿ ಕುಳಿತ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್. ದೇವರಹಳ್ಳಿ ಗ್ರಾಮದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಂಜುನಾಥ್ ಎಂಬ ಯುವಕ ಮೊದಲನೆ ಲಸಿಕೆ ಪಡೆದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಅಧಿಕಾರಿಗಳು ಲಸಿಕೆ ಹಾಕಲು ಹೋದಾಗ, ಮಂಜುನಾಥ್ ನನಗೆ ಲಸಿಕೆ ಬೇಡ ಎಂದು ಹಠ ಹಿಡಿದು ಮನೆ ಏರಿ ಕುಳಿತಿದ್ದನು. ಆಗ ಚಳ್ಳಕೆರೆ ತಾಲೂಕು ತಹಶೀಲ್ದಾರ್ ಎನ್.ರಘುಮೂರ್ತಿ, ಮನವೊಲಿಸಿ ಲಸಿಕೆ ಹಾಕಿಸಿದ್ದಾರೆ.










