ಅಪ್ರಾಪ್ತ ಬಾಲಕಿ ಮೇಲೆ ನೆರೆಮನೆಯವನಿಂದ ಅತ್ಯಾಚಾರ!

90
firstsuddi

ನವದೆಹಲಿ : ಅಸ್ವಸ್ಥ ತಾಯಿಗೆ ಔಷಧ ತರಲು ಸಹಾಯ ಕೇಳಿದ ಅಪ್ರಾಪ್ತ ಬಾಲಕಿ ಮೇಲೆ ನೆರೆಮನೆಯ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಜನವರಿ 22ರಂದು ಘಟನೆ ನಡೆದಿದ್ದು, ಮರುದಿನ ದೆಹಲಿಯ ಪಾಂಡವ್ ನಗರ ಪೊಲೀಸ್ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಾಳೆ. ನನ್ನ ತಂದೆ ಊರಿಗೆ ಹೋಗಿದ್ದರು. ಅಮ್ಮನೊಂದಿಗೆ ನಾನು ಮನೆಯಲ್ಲಿ ಒಬ್ಬಳೇ ಇದ್ದೆ. ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಪಕ್ಕದ ಮನೆಯವರ ಬಳಿ ಸಹಾಯ ಕೇಳಿದ್ದೆ. ಆದರೆ, ಔಷಧಿ ಕೊಡಿಸಿ ಸಹಾಯ ಮಾಡುವ ನೆಪದಲ್ಲಿ ಪಕ್ಕದ ಮನೆಯ ವ್ಯಕ್ತಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.

ಅಲ್ಲದೇ ಆಕೆಗೆ ಈ ವಿಚಾರ ಹೊರಗೆ ಹೇಳಿದರೆ, ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.