ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ವಿದ್ಯಾರ್ಥಿನಿಯರ ಪ್ರಯಾಣ – ಬಸ್‍ಗೆ ದಂಡ…

68
firstsuddi

ಮಂಗಳೂರು : ಖಾಸಗಿ ಬಸ್ ನಲ್ಲಿ ವಿದ್ಯಾರ್ಥಿನಿಯರು ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಪ್ರಯಾಣಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಗರ ಸಂಚಾರಿ ಪೊಲೀಸರು ಬಸ್ಸಿಗೆ ದಂಡ ವಿಧಿಸಿದ್ದಾರೆ.

ನಗರದ ಬೊಂದೆಲ್ ಕಡೆಗೆ ಸಂಚರಿಸುವ ಬಸ್ಸಿನಲ್ಲಿ ವಿದ್ಯಾರ್ಥಿನಿಯರು ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ಗಮನಿಸಿದ ನಗರ ಸಂಚಾರಿ ಪೊಲೀಸರು ಕೂಡಲೇ ಬಸ್ಸನ್ನು ಪತ್ತೆಹಚ್ಚಿ 500 ರೂ. ದಂಡ ವಿಧಿಸಿದ್ದಾರೆ.

ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.