ಧಾರವಾಡ : ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪನ್ನು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಅಣ್ಣಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಣ್ಣಿಗೇರಿ ಪಟ್ಟಣದ ನಾಗಪ್ಪ ಹಡಪದ ಬಂಧಿತ ಆರೋಪಿ. ನಿನ್ನೆ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಪೊಲೀಸ್ ಜೀಪ್ ಕಳ್ಳತನ ಮಾಡಿದ್ದ ನಾಗಪ್ಪ ನಂತರ ಅದನ್ನು ಹಾವೇರಿ ಜಿಲ್ಲೆಯ ಬ್ಯಾಡಗಿವರೆಗೆ ತೆಗೆದುಕೊಂಡು ಹೋಗಿದ್ದಾನೆ. ಸದ್ಯ ಪೊಲೀಸ್ ಜೀಪ್ ಬ್ಯಾಡಗಿಯ ಬಳಿ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ನಾಗಪ್ಪ ಹಡಪದನಿಗೆ ಪೊಲೀಸ್ ವಾಹನವನ್ನ ಚಲಾಯಿಸುವುದು ಅಚ್ಚು ಮೆಚ್ಚಂತೆ. ಅಷ್ಟೇ ಅಲ್ಲ, ಅದನ್ನೇ ಕದ್ದು ಚಲಾಯಿಸಬೇಕೆಂಬ ಕನಸು ಕಂಡಿದ್ದನಂತೆ. ಹೀಗಾಗಿ ಪೊಲೀಸ್ ಜೀಪ್ ಕಳ್ಳತನ ಮಾಡಿದ್ದ ಎನ್ನಲಾಗಿದೆ.










