ಕಲಬುರಗಿಯಲ್ಲಿ ಚಿಕನ್‌ಪಾಕ್ಸ್ ಆತಂಕ – 20ಕ್ಕೂ ಹೆಚ್ಚು ಮಕ್ಕಳಲ್ಲಿ ಕಾಣಿಸಿಕೊಂಡ ರೋಗ…

54
firstsuddi

ಕಲಬುರಗಿ : ಜಿಲ್ಲೆಯಲ್ಲಿ ಚಿಕನ್‌ಪಾಕ್ಸ್ ಆತಂಕ ಎದುರಾಗಿದೆ. ಸದ್ಯ ಜಿಲ್ಲೆಯ 20ಕ್ಕೂ ಅಧಿಕ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದೆ.

ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಕ್ಕಳಲ್ಲಿ ಚಿಕನ್ ಫಾಕ್ಸ್ ಲಕ್ಷಣಗಳು ಕಾಣಿಸಿವೆ. ಲಾಡ್ಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮೈ ತುಂಬಾ ಗುಳ್ಳೆಗಳಾಗಿದ್ದು, ಜ್ವರ ಹಾಗು ತುರಿಕೆಯಿಂದ ಬಳಲುತ್ತಿದ್ದಾರೆ.

ಚಿಕನ್ ಪಾಕ್ಸ್ ನಿಂದ ಬಳಲುತ್ತಿರುವ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗಾಗಲಿ ಅಥವಾ ಶಾಲೆಗಳಿಗೆ ಕಳುಹಿಸಬೇಡಿ. ಒಬ್ಬರಿಂದ ಮತ್ತೊಬ್ಬರಿಗೆ ಈ ರೋಗ ಹರಡುತ್ತಿದೆ. ಒಂದು ವೇಳೆ ತುಂಬಾ ಗಂಭೀರ ಪರಿಸ್ಥಿತಿ ಉಂಟಾದಲ್ಲಿ ಅಂತಹ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಜಿಲ್ಲೆಯಲ್ಲಿ ಚಿಕನ್ ಫಾಕ್ಸ್ ಹೆಚ್ಚಾಗಿ ಕಾಣಿಸಿಕೊಂಡಿದ್ದು, ನಾಲವಾರ ಗ್ರಾಮದಲ್ಲಿ. ನಾಲವಾರ್ ಗ್ರಾಮದ ನಿವಾಸಿಯಾಗಿರುವ 33 ವರ್ಷದ ಹಪೀಜಾ ಬೇಗಂ ಮತ್ತು ಅವರ ನಾಲ್ವರು ಮಕ್ಕಳಿಗೆ ಚಿಕನ್ ಫಾಕ್ಸ್ ಸೋಂಕು ವಕ್ಕರಿಸಿತ್ತು. ಹಪೀಜಾ ಬೇಗಂನ ಎಂಟು ವರ್ಷದ ಮಗ ಇಮ್ರಾನ್ ಕಳೆದ ಜನವರಿ 17 ರಂದು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಇನ್ನೋಬ್ಬ ಮಗ, ಹದಿನೈದು ವರ್ಷದ ರೆಹಮಾನ್, ಮಹರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಜನವರಿ 30ರಂದು ಮೃತಪಟ್ಟಿದ್ದಾನೆ. ಅದಾದ ಬಳಿಕ ಚಿತ್ತಾಪುರ ತಾಲೂಕಿನಲ್ಲೇ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ.