ಹಿಜಾಬ್ ವಿವಾದ – ಹೈಕೋರ್ಟ್ ಪ್ರಕಟಿಸಿದ ಮಧ್ಯಂತರ ಆದೇಶದಲ್ಲಿ ಏನಿದೆ?

98
firstsuddi

ಬೆಂಗಳೂರು : ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ನಿನ್ನೆ ಮೌಖಿಕ ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ್ ಇಂದು ಮಧ್ಯಂತರ ಆದೇಶವನ್ನು ಪ್ರಕಟಿಸಿದೆ.

ಹೈಕೋರ್ಟ್ ಹೀಗೆ ಹೇಳಿದೆ : ನಮ್ಮದು ಬಹು ಸಂಸ್ಕೃತಿ, ಧರ್ಮ, ಭಾಷೆಗಳ ದೇಶ. ಜ್ಯಾತ್ಯಾತೀತ ರಾಷ್ಟ್ರವಾಗಿ, ಪ್ರತಿಯೊಬ್ಬರಿಗೂ ಆತನ ಆಯ್ಕೆಯ ನಂಬಿಕೆಯನ್ನು ಆಚರಿಸಲು ಹಕ್ಕಿದೆ ನಿಜ. ಆದರೆ ಈ ಹಕ್ಕು ಪರಿಪೂರ್ಣ ಹಕ್ಕಲ್ಲ, ತರಗತಿಯಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕೇ? ಎಂಬ ಪ್ರಶ್ನೆಯಿದೆ. ಈ ಬಗ್ಗೆ ಆಳವಾದ ವಿಚಾರಣೆ ನಡೆಸುವ ಅಗತ್ಯವಿದೆ. ಧರ್ಮ, ಸಂಸ್ಕೃತಿ ಹೆಸರಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿ ಇಂತಹ ಕೃತ್ಯ ನಡೆಸಲು ಅವಕಾಶವಿಲ್ಲ. 

ಮುಗಿಯದ ಪ್ರತಿಭಟನೆಗಳು ಮತ್ತು ಅನಿರ್ದಿಷ್ಟವಾಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿರುವುದು ಒಳ್ಳೆಯದಲ್ಲ. ತುರ್ತು ಆಧಾರದಲ್ಲಿ ಈ ವಿಷಯಗಳ ವಿಚಾರಣೆ ಮುಂದುವರಿಯಲಿದೆ. ಪ್ರತಿಭಟನೆಗಳ ಮುಂದುವರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದರ ಬದಲು ತರಗತಿಗಳಿಗೆ ಮರುಳುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿಗೆ ಒಳ್ಳೆಯದು. ಶೈಕ್ಷಣಿಕ ವರ್ಷ ಶೀಘ್ರವೇ ಅಂತ್ಯವಾಗಲಿದೆ. ಸಂಬಂಧಪಟ್ಟವರು ಮತ್ತು ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದತೆಯನ್ನು ಆಶಿಸುತ್ತೇವೆ. 

ಆದಷ್ಟು ಬೇಗ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿ. ಈ ಅರ್ಜಿಗಳ ವಿಚಾರಣೆ ಬಾಕಿ ಇರಿಸಿ, ಎಲ್ಲ ವಿದ್ಯಾರ್ಥಿಗಳು ಅವರವರ ಧರ್ಮ ಅಥವಾ ನಂಬಿಕೆ ಕೇಸರಿ ಶಾಲು, ಹಿಜಬ್, ಧರ್ಮ ಧ್ವಜಗಳು ಅಥವಾ ಇತರೆಗಳನ್ನು ತರಗತಿಯೊಳಗೆ ಮುಂದಿನ ಆದೇಶದವರೆಗೂ ಧರಿಸದಂತೆ ನಿರ್ಬಂಧಿಸುತ್ತಿದ್ದೇವೆ ಎಂದು ಕೋರ್ಟ್ ತಿಳಿಸಿದೆ.