ಯುವತಿ ಮೇಲೆ ಅತ್ಯಾಚಾರವೆಸಗಿ ಮಾರಾಟ ಮಾಡಲು ಯತ್ನ – ಆರೋಪಿ ಅರೆಸ್ಟ್…

89
firstsuddi

ದೇವನಹಳ್ಳಿ : ಮನೆ ಬಿಟ್ಟು ಬಂದಿದ್ದ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

ನಾಗೇಶ್ ಬಂಧಿತ ಆರೋಪಿ. ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಯುವತಿ ಕೋಲಾರದಿಂದ ಬೆಂಗಳೂರಿಗೆ ಬಂದಿದ್ದಳು. ಕೆಲಸವನ್ನರಸಿಕೊಂಡು ಬಂದು ಮೆಜೆಸ್ಟಿಕ್ ನಲ್ಲಿ ಕೂತಿದ್ದಳು. ಈ ವೇಳೆ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡ್ತಿದ್ದ ನಾಗೇಶ್ ಯುವತಿಯ ಬಳಿ ಬಂದು ಆಕೆಯನ್ನು ವಿಚಾರಿಸಿದ್ದಾನೆ. ಆಗ ಆಕೆ ಎಲ್ಲಾ ವಿಷಯವನ್ನು ಹಂಚಿಕೊಂಡಿದ್ದಾಳೆ. ಬಳಿಕ ಕೆಲಸ ಕೊಡಿಸುವುದಾಗಿ ನಂಬಿಸಿ ದೇವನಹಳ್ಳಿಗೆ ಕರೆದುಕೊಂಡು ಬಂದು ಯುವತಿ ಮೇಲೆ ಅತ್ಯಾಚಾರವೆಸಗಿ ನಂತರ ವೇಶ್ಯಾವಾಟಿಕೆ ಅಡ್ಡೆಗೆ ಮಾರಾಟ ಮಾಡಲು ದೆಹಲಿಗೆ ಕರೆದುಕೊಂಡು ಹೋಗುವಾಗ ಏರ್ ಪೋರ್ಟ್ ನಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಆರೋಪಿ ನಾಗೇಶ್ ಯುವತಿಯನ್ನು ದೆಹಲಿಗೆ ಕರೆದೊಯ್ಯಲು ಯತ್ನಿಸಿದ್ದ ವೇಳೆ ಅನುಮಾನಗೊಂಡು ಸಿಐಎಸ್ಎಫ್ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ 10 ಸಾವಿರ ರೂಪಾಯಿಗೆ ಮಾರಾಟ ಮಾಡಲು ಯುವತಿಯನ್ನು ದೆಹಲಿಗೆ ಕರೆದೊಯ್ಯುತ್ತಿರೋದಾಗಿ ಬಾಯಿ ಬಿಟ್ಟಿದ್ದಾನೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಪೋರ್ಟ್ ಭದ್ರತಾ ಪಡೆ ಸಿಐಎಸ್ಎಫ್ ಸಿಬ್ಬಂದಿ ಯುವತಿಯ ರಕ್ಷಣೆ ಮಾಡಿದ್ದಾರೆ.

ಆರೋಪಿ ನಾಗೇಶ್ ಈ ಹಿಂದೆಯೂ ಕೂಡ ಕೆಲ ಯುವತಿಯರನ್ನು ನಂಬಿಸಿ ಮಾರಾಟ ಮಾಡಿದ್ದ ಎನ್ನಲಾಗಿದೆ. ಸದ್ಯ ಏರ್ ಪೋರ್ಟ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.