ಆರತಕ್ಷತೆ ವೇಳೆ ಕುಸಿದು ಬಿದ್ದ ಮದುಮಗಳು – ಬ್ರೈನ್ ಡೆಡ್…

88
firstsuddi

ಕೋಲಾರ : ಯುವತಿಯ ಸುಂದರ ಬದುಕನ್ನು ಮದುವೆ ಆರತಕ್ಷತೆ ವೇಳೆಯೇ ವಿಧಿ ಕಸಿದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶ್ರೀನಿವಾಸಪುರ ಮೂಲದ ಚೈತ್ರಾ (26) ಆರತಕ್ಷತೆ ವೇಳೆ ಕುಸಿದುಬಿದ್ದ ಮದುಮಗಳು. ಪೋಷಕರು ವಧು ಚೈತ್ರಾ ಆರತಕ್ಷತೆಯನ್ನು ಭರ್ಜರಿಯಾಗಿ ಆಯೋಜಿಸಿದ್ದರು. ಆದರೆ ವಧು ಚೈತ್ರ ಹಠಾತ್ ಆಗಿ ಆರತಕ್ಷತೆ ವೇಳೆಯೇ ಕುಸಿದು ಬಿದ್ದರು. ಕೂಡಲೇ ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ವೈದ್ಯರು ಚೈತ್ರಾಳ ಬ್ರೈನ್ ಡೆಡ್ ಆಗಿದೆ. ಅವಳು ಬದುಕುಳಿಯುವುದು ಅಸಾಧ್ಯ ಎಂದು ಆಕೆಯ ಪೋಷಕರಿಗೆ ತಿಳಿಸಿದ್ದಾರೆ. ಇಂತಹ ಹೃದಯವಿದ್ರಾವಕ ದುರಂತದ ನಡುವೆಯೂ ಆಕೆಯ ಪೋಷಕರು ಚೈತ್ರಾಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.

ಇನ್ನು ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಅವರು ತಮ್ಮ ಟ್ಟಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 26 ವರ್ಷದ ಚೈತ್ರಾಗೆ ಇದು ದೊಡ್ಡ ದಿನವಾಗಿತ್ತು. ಆದರೆ ವಿಧಿಯು ಇತರ ಯೋಜನೆಗಳನ್ನು ಹೊಂದಿತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮದುವೆಯ ಆರತಕ್ಷತೆ ವೇಳೆ ಚೈತ್ರಾ ಕುಸಿದು ಬಿದ್ದರು. ನಂತರ ನಿಮ್ಹಾನ್ಸ್ ನಲ್ಲಿ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದರು. ಆಕೆಯ ಪೋಷಕರು ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದೊಂದು ಉದಾತ್ತ ಕಾರ್ಯವಾಗಿದ್ದು, ಎಲ್ಲರಿಗೂ ಮಾದರಿಯಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.