ಉದ್ಯಮಿ, ಬಜಾಜ್ ಗ್ರೂಪ್ ಚೇರ್ಮನ್ ರಾಹುಲ್ ಬಜಾಜ್ ವಿಧಿವಶ…

71
firstsuddi

ಪುಣೆ : ಹಿರಿಯ ಉದ್ಯಮಿ, ಬಜಾಜ್ ಗ್ರೂಪ್ ಚೇರ್ಮನ್ ರಾಹುಲ್ ಬಜಾಜ್ (83)ಅವರು ಇಂದು ವಿಧಿವಶರಾಗಿದ್ದಾರೆ.

ರಾಹುಲ್ ಬಜಾಜ್ ಅವರು ಜೂನ್ 10, 1938ರಂದು ಜನಿಸಿದ್ದು, ಅರ್ಥಶಾಸ್ತ್ರ ಮತ್ತು ಕಾನೂನಿನಲ್ಲಿ ಪದವಿ, ಹುವಾರ್ಡ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. 5 ದಶಕಗಳಿಂದ ಬಜಾಜ್ ಆಟೋ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ರಾಹುಲ್ ಬಜಾಜ್ ಅವರು ಕಳೆದ ವರ್ಷ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಹುಲ್ ಬಜಾಜ್ ರಾಜ್ಯಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದ್ದರು. ರಾಹುಲ್ ಬಜಾಜ್ ಅವರಿಗೆ 2001ರಲ್ಲಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.