ಹರ್ಷ ಹತ್ಯೆ ಪ್ರಕರಣ – ಏಳು ಆರೋಪಿಗಳ ಬಂಧನ, ಯಾರದು ಯಾವ ಪಾತ್ರ?

73
firstsuddi

ಶಿವಮೊಗ್ಗ : ನಗರದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

2016 ಮತ್ತು 2017 ರಿಂದಲೇ ಹರ್ಷ ವಿರುದ್ದ ಆರೋಪಿಗಳು ಕಣ್ಣಿಟ್ಟಿದ್ದರು. ಹರ್ಷ ಮಸೀದಿಗೆ ಹಂದಿ ಫೋಟೊ ಅಂಟಿಸಿದ್ದ. ಅದು ಪೊಲೀಸ್ ಕೇಸ್ ಆಗಿದ್ದಾಗಿಂದ ಹರ್ಷ ವಿರುದ್ದ ದ್ವೇಷ ಕಾರುತ್ತಿದ್ದರು. ಈ ನಡುವೆ 2020 ರಲ್ಲಿ ಹರ್ಷ ಮತ್ತು ಖಾಸಿಫ್ ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದರು. ನಂತರ ಕೆಲ ತಿಂಗಳ ಹಿಂದೆ ಕೋರ್ಟ್ ಬಳಿ ಹಾಗೂ ಹೊಟೇಲ್ ಮುಂದೆ ಇಬ್ಬರ ಮಧ್ಯೆ ಗಲಾಟೆಗಳಾಗಿದ್ದವು. ಆ ಬಳಿಕ ಹರ್ಷನನ್ನು ಹೊಡೆಯಬೇಕು ಎಂದು ಖಾಸಿಫ್ ತೀರ್ಮಾನ ಮಾಡಿದ್ದ. ಅದ್ರೆ ಯಾವತ್ತು ಹೊಡೆಯಬೇಕು ಎಂಬುದು ತೀರ್ಮಾನ ಅಗಿರಲಿಲ್ಲ.

ಖಾಸಿಫ್, ತನ್ನ ಸಹಚರರಿಗೆ ಹರ್ಷನ ಚಲನವಲನದ ಬಗ್ಗೆ ನಿಗಾ ಇಡುವಂತೆ ಸೂಚಿಸಿದ್ದ. ಅದರಂತೆ ಕಳೆದ ಎರಡು ತಿಂಗಳಿಂದ ಹರ್ಷ ಎಲ್ಲಿ ಹೋಗ್ತಾನೆ, ಎಲ್ಲಿ ಬರ್ತಾನೆ, ಯಾವಾಗ ಒಂಟಿ ಅಗಿರ್ತಾನೆ ಅನ್ನೊ ಮಾಹಿತಿ ಕಲೆ ಹಾಕುತಿದ್ದರು. ಹಿಜಾಬ್ ಗಲಾಟೆ ಶುರುವಾಗುತ್ತಿದ್ದಂತೆ ಹರ್ಷನ ಮೇಲೆ ಮತ್ತಷ್ಟು ದ್ವೇಷ ತುಂಬಿಕೊಂಡಿದ್ರು. ಕೃತ್ಯ ನಡೆದ ದಿನ ಹರ್ಷ ಒಬ್ಬನೆ ಇರೋದು ಅರೋಪಿಗಳ ಕಣ್ಣಿಗೆ ಬಿದ್ದಿತ್ತು.

ಯಾವಾಗಾದ್ರು ಹೊಡೆಯಬೇಕು ಎಂದು ತೀರ್ಮಾನ ಮಾಡಿದ್ದ ಅರೋಪಿಗಳು ಯಾವಾಗಲೂ ಚಾಕು ಡ್ಯಾಗರ್ ಗಳನ್ನು ತಮ್ಮ ವಾಹನದಲ್ಲಿ ಇಟ್ಟುಕೊಳ್ಳುತ್ತಿದ್ದರು. ಹರ್ಷನದು ಜಾಸ್ತಿ ಅಗಿದೆ, ಮುಗಿಸಿ ಬಿಡುವಾ ಎಂದು ಅಟ್ಯಾಕ್ ಮಾಡಲು ಸಿದ್ಧವಾಗಿಯೇ ಇದ್ದರು. ಕೊನೆಗೆ ಭಾನುವಾರ ಅಟ್ಯಾಕ್ ಮಾಡಿಯೇ ಬಿಟ್ಟರು. ಹಂತಕರ ಪೈಕಿ ಕೆಲವು ಅರೋಪಿಗಳು ಇನ್ನೂ ತಲೆಮರಿಸಿಕೊಂಡಿದ್ದಾರೆ. ಸದ್ಯ ಆ ಅರೋಪಿಗಳಿಗಾಗಿ ಶಿವಮೊಗ್ಗ ಪೊಲೀಸರು ಬೇಟೆಯಾಡುತ್ತಿದ್ದಾರೆ.

ಬಂಧಿತ ಆರೋಪಿಗಳ ಸಂಪೂರ್ಣ ಹಿಸ್ಟರಿ ಹೀಗಿದೆ:
ಎ1 – ಕಾಸಿಫ್ : ಕಾಸಿಫ್(32) ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. 2020ರಲ್ಲಿ ಕಾಸಿಫ್ ಗ್ಯಾಂಗ್ ಹಾಗೂ ಹರ್ಷನ ಗ್ಯಾಂಗ್ ನಡುವೆ ಶಿವಮೊಗ್ಗ ಜೈಲಿನಲ್ಲಿ ಗಲಾಟೆಯಾಗಿತ್ತು. ಅಂದಿನಿಂದ ದ್ವೇಷ ಹೊಂದಿದ್ದ ಕಾಸಿಫ್ ಹುಡುಗರನ್ನು ರೆಡಿ ಮಾಡಿ ಅಟ್ಯಾಕ್ ಮಾಡಿಸಿದ್ದ. ಈತನನ್ನು ಕ್ಲಾರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ.

ಎ2 – ನದೀಮ್ : 23 ವರ್ಷದ ನದೀಮ್ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಮ್ ಮೇಲಿದ್ದು, ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನು ಭಾನುವಾರ ಮಧ್ಯರಾತ್ರಿ ಈತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.

ಎ3 – ಆಸಿಫ್ ಖಾನ್ : 21 ವರ್ಷದ ಆಸಿಫ್ ಖಾನ್ ಕೊಲೆ ಮಾಡುವ ಉದ್ದೇಶದಿಂದ ಕಾಸಿಫ್ ನ ಮಾತಿನಂತೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ.

ಎ4 – ರಿಯಾನ್ ಶರೀಫ್ ಅಲಿಯಾಸ್ ಖಸಿ : 22 ವರ್ಷದ ಈತ ಕ್ಲಾರ್ಕ್ ಪೇಟೆ ನಿವಾಸಿ. ಕೊಲೆಗೂ ಮೊದಲು ಕಾಸಿಫ್ ನ ಪ್ಲಾನಿಂಗ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದ. ಅಲ್ಲದೆ ಹರ್ಷನ ಮೇಲೆ ಹಲ್ಲೆ ಮಾಡಿದ್ದ. ಈತನನ್ನ ಹಾಸನದಲ್ಲಿ ದಸ್ತಗಿರಿ ಮಾಡಲಾಗಿದೆ.

ಎ5 – ನಿಹಾನ್ ಅಲಿಯಾಸ್ ಮುಜಾಹಿದ್ : 23 ವರ್ಷದ ಈತ ಕೂಡ ಶಿವಮೊಗ್ಗದ ಕ್ಲಾರ್ಕ್ ಪೇಟೆ ನಿವಾಸಿಯಾಗಿದ್ದು, ಸ್ನೇಹಿತರ ಗ್ಯಾಂಗ್ ಜೊತೆ ಮೀಟಿಂಗ್ ಮಾಡುತ್ತಿದ್ದ. ಖಾಸಿಫ್ ನ ಅಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ. ಚಿಕ್ಕಮಗಳೂರಿನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎ6 – ಅಬ್ದುಲ್ ಅಪ್ನಾನ್ : ಅಬ್ದುಲ್ ಅಪ್ನಾನ್ ವಯಸ್ಸು 21. ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲವಾದರೂ ಇನ್ ಡೈರೆಕ್ಟ್ ಆಗಿ ಭಾಗಿಯಾಗಿದ್ದಾನೆ. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನೋ ಅಥವಾ ಇಲ್ಲವೋ ಹೀಗೆ ಪ್ರತಿಯೊಂದು ಮಾಹಿತಿಯನ್ನು ಖಾಸಿಫ್ ಗೆ ಈತ ನೀಡುತ್ತಿದ್ದ. ಕೊಲೆ ಬಳಿಕ ಈತ ಆರೋಪಿಗಳ ರಕ್ಷಣೆಗೆ ಪ್ರಯತ್ನ ಪಟ್ಟಿದ್ದ.

ಎ7 – ಜಿಲಾನ್ : ಈತ ಕೊಲೆ ನಡೆದ ಬಳಿಕ ಆರೋಪಿಗಳನ್ನು ಕಾರ್ ನಲ್ಲಿ ಕರೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ.