ರಷ್ಯಾ ಉಕ್ರೇನ್​ನೊಂದಿಗೆ ಮಾತುಕತೆಗೆ ಸಿದ್ಧವಿದೆ : ರಷ್ಯಾದ ವಿದೇಶಾಂಗ ಸಚಿವ.

73
firstsuddi

ಮಾಸ್ಕೋ : ರಷ್ಯಾ ಉಕ್ರೇನ್​ನೊಂದಿಗೆ ಮಾತುಕತೆಗೆ ಸಿದ್ಧವಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಹೇಳಿದ್ದಾರೆ.

ಉಕ್ರೇನ್ ಮೇಲೆ ದಾಳಿ ನಡೆಸಿ, ಅದನ್ನ ಆಕ್ರಮಣ ಮಾಡಿಕೊಳ್ಳುವ ಉದ್ದೇಶ ನಮಗಿಲ್ಲ. ಆದರೆ ಅಲ್ಲಿನ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಮುಂದಾಗಿದ್ದೇವೆ. ಉದ್ವಿಗ್ನತೆ ಶಮನಗೊಳಿಸಲು ತಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿ ಲಾವ್ರೋವ್ ತಿಳಿಸಿದ್ದಾರೆ. ಆದರೆ, ಇದಕ್ಕೆ ಉಕ್ರೇನ್ ಶಸ್ತ್ರಾಸ್ತ್ರ ಕೆಳಗಿಳಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.

ಹೋರಾಟದ ಮೊದಲ ದಿನದಲ್ಲಿ ನಾಗರಿಕರು ಸೇರಿದಂತೆ ಕನಿಷ್ಠ 137 ಉಕ್ರೇನಿಯನ್ನರು ಹತರಾಗಿದ್ದಾರೆ. ಯುದ್ಧವು ಇಂದು ಮತ್ತಷ್ಟು ಮುಂದುವರೆದಿದ್ದು, ಟ್ಯಾಂಕರ್ ಗಳು ಮತ್ತು ಕ್ಷಿಪಣಿ ಲಾಂಚರ್ ಗಳೊಂದಿಗೆ ರಷ್ಯಾದ ಭೂ ಪಡೆಗಳು ಉಕ್ರೇನ್ ರಾಜಧಾನಿ ಕೈವ್ ಅನ್ನು ಸುತ್ತುವರೆಯುತ್ತಿವೆ ಎಂದು ವರದಿಗಳು ಹೇಳಿವೆ.