ಭಾರತೀಯ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ : ವಿದೇಶಾಂಗ ವ್ಯವಹಾರಗಳ ಸಚಿವಾಲಯ.

53
firstsuddi

ನವದೆಹಲಿ : ಉಕ್ರೇನ್ ನ ರಾಜಧಾನಿ ಕೀವ್ ನಲ್ಲಿ ರಷ್ಯಾದ ಗುಂಡಿನ ದಾಳಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಭಾರತ ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ತಿಳಿಸಿದೆ.

ಫೆಬ್ರವರಿ 27ರಂದು ಹರ್ಜೊತ್ ಸಿಂಗ್(31) ತನ್ನಿಬ್ಬರು ಸ್ನೇಹಿತರೊಂದಿಗೆ ಪಶ್ಚಿಮ ಉಕ್ರೇನ್ ನಲ್ಲಿರುವ ಎಲ್ವಿವ್ ನಗರಕ್ಕೆ ಯುದ್ಧಪೀಡಿತ ಕೀವ್ ನಗರದಿಂದ ಹೋಗಲು ಕ್ಯಾಬ್ ಹತ್ತಿದ್ದರು. ಈ ವೇಳೆ ಅವರ ಎದೆಭಾಗ ಸೇರಿದಂತೆ ದೇಹದ ಮೇಲೆ ನಾಲ್ಕು ಬುಲ್ಲೆಟ್ ಬಿದ್ದಿದೆ. ಈ ಘಟನೆ ಬಗ್ಗೆ ನಮಗೆ ಅರಿವಿದೆ. ನಮ್ಮ ರಾಯಭಾರಿಗಳು ಅವರ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದೇವೆ. ಕೀವ್ ನ ಆಸ್ಪತ್ರೆಯಲ್ಲಿ ಹರ್ಜೊತ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.