ಬೆಂಗಳೂರು : ಬಿಎಂಟಿಸಿ ಬಸ್ ಪಾಸ್ ಗಾಗಿ ಇನ್ನು ಮುಂದೆ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಅಗತ್ಯ ಇಲ್ಲ. ಏಕೆಂದರೆ ನಿಮ್ಮ ಮೊಬೈಲ್ ನಲ್ಲೇ ಬಸ್ ಪಾಸ್ ಸಿಗಲಿದೆ. ಮೊಬೈಲ್ ಫೋನ್ ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸುವುದಕ್ಕೆ ಬಿಎಂಟಿಸಿ ಅವಕಾಶ ಕಲ್ಪಿಸಲಿದೆ.
ನಗರದ ಖಾಸಗಿ ಟೆಕ್ ಸಂಸ್ಥೆ ಟುಮೊಕ್ ಕಂಪನಿಯ ಸಹಭಾಗಿತ್ವದಲ್ಲಿ ಮೊಬೈಲ್ ಆ್ಯಪ್ ಪರಿಚಯಿಸುತ್ತಿರುವ ಬಿಎಂಟಿಸಿ, ಮೊಬೈಲ್ ಆ್ಯಪ್ ಅನ್ನು ಬಸ್ ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್ ಟಿಕೆಟ್ ಮಿಷನ್ (ಇಟಿಎಂ) ಗಳಲ್ಲಿ ಸ್ಕ್ಯಾನ್ ಮಾಡಿ ಪ್ರಯಾಣಿಬಹುದಾಗಿದೆ. ಬಸ್ ಗಳ ನಿರ್ವಾಹಕರ ಬಳಿ ಇಟಿಎಂ ಮಿಷನ್ ಗಳಿರಲಿದ್ದು, ಅದರಲ್ಲಿ ಮೊಬೈಲ್ ನಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ ಎಂದಿದೆ.










