ಜೇಮ್ಸ್ ಹವಾ : ಚಿತ್ರ ಮಂದಿರಗಳೆದುರು ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ…

71
firstsuddi

ಹಾವೇರಿ/ ರಾಯಚೂರು : ವಿಶ್ವದಾದ್ಯಂತ ‘ಜೇಮ್ಸ್’ ಅಬ್ಬರ ಜೋರಾಗಿದ್ದು ಸಿನಿಮಾ ಥಿಯೇಟರ್ ಗಳ ಮುಂದೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇತ್ತ ರಾಯಚೂರು, ಕೊಪ್ಪಳ ಜಿಲ್ಲೆಯಲ್ಲೂ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳ ಎದುರು ಅಪ್ಪು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಹಾವೇರಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ನಗರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಪ್ಪು ಅಭಿಮಾನಿಗಳು ಥಿಯೇಟರ್ ಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿತ್ರಮಂದಿರಗಳ ಮುಂದೆ ಜಾಂಜ್ ಮೇಳದ ಸದ್ದಿಗೆ ಅಭಿಮಾನಿಗಳು ಹೆಜ್ಜೆ ಹಾಕಿದರು. ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ.

ರಾಯಚೂರು: ಜಿಲ್ಲೆಯಾದ್ಯಂತ ಜೇಮ್ಸ್ ಹವಾ ಜೋರಾಗಿ ಕಂಡು ಬಂದಿದೆ. ಬೆಳಗ್ಗೆಯೇ ದಿ. ಪುನಿತ್ ರಾಜ್ ಕುಮಾರ್ ಅಭಿಮಾನಿಗಳು ಬ್ಯಾನರ್ ಗಳು, ಫೋಟೋಗಳಿಗೆ ಪೂಜೆ, ಹಾಲಿನ ಅಭಿಷೇಕ ಮಾಡಿ ಹೂವಿನ ಹಾರ ಹಾಕಿ ನಮನ ಸಲ್ಲಿಸಿದರು. ಸಿನಿಮಾ ಆರಂಭಕ್ಕೂ ಮುನ್ನ ಅಭಿಮಾನಗಳು ಬ್ಯಾಂಡ್ ಸದ್ದಿಗೆ ಕುಣಿದು ಕುಪ್ಪಳಿಸಿದರು. ಇನ್ನೂ ಟಿಕೆಟ್ ಪಡೆಯುವ ವೇಳೆ ನೂಕುನುಗ್ಗುಲು ಉಂಟಾಗಿದ್ದು, ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ಹೈರಾಣರಾದರು.