ಮಹಿಳಾ ಸಬಲೀಕರಣ, ಸಶಕ್ತಿಕರಣಕ್ಕೆ ವಿಮುಕ್ತಿ ಬಣಕಲ್ ಸಂಸ್ಥೆಯ ಪಾತ್ರ ಅಪಾರ : ಅರುಣ್ ಲೋಬೊ.

91
firstsuddi

ಕೊಟ್ಟಿಗೆಹಾರ : ಮಹಿಳಾ ಸಬಲೀಕರಣ, ಸಶಕ್ತಿಕರಣಕ್ಕೆ ವಿಮುಕ್ತಿ ಬಣಕಲ್ ಸಂಸ್ಥೆಯ ಪಾತ್ರ ಅಪಾರವಾದದ್ದು ಎಂದು ಚನ್ನಹಳ್ಳಿ ಪಾಳ್ಯದ ಮಾದಕ, ಮದ್ಯ ವ್ಯಸನಮುಕ್ತ ಮತ್ತು ಆಪ್ತಸಮಾಲೋಚನ ಕೇಂದ್ರದ ನಿರ್ದೇಶಕರಾದ ಅರುಣ್ ಲೋಬೊ ಹೇಳಿದರು.

ಕಪುಚಿನ್ ಕೃಷಿಕ ಸೇವಾ ಕೇಂದ್ರ, ಬಣಕಲ್‍ನ ವಿಮುಕ್ತಿ ಮಹಿಳಾ ಒಕ್ಕೂಟದ ವತಿಯಿಂದ ಬಣಕಲ್ ಚರ್ಚ್ ಸಮುದಾಯ ಭವನದಲ್ಲಿ ನಡೆದ ವಿಮುಕ್ತಿ, ಬಣಕಲ್ ದ್ವಿದಶಮಾನೋತ್ಸವ ಮತ್ತು ಮಹಿಳಾ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರ ಆರ್ಥಿಕ ಸಬಲೀಕರಣ, ಮಹಿಳೆಯರ ವ್ಯಕ್ತಿತ್ವ ವಿಕಸನ, ಕೌಟುಂಬಿಕ ಮತ್ತು ಸಾಮಾಜಿಕ ಬಲವರ್ದನೆ, ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಲೂ ಪ್ರಚೋದಿಸುವುದು ಹಾಗೂ ಮಾಹಿತಿ ಮತ್ತು ತರಬೇತಿಗಳಿಂದ ಕೌಶಲ್ಯ ವೃದ್ದಿ ಮುಂತಾದ ಕಾರ್ಯಗಳಿಂದ ವಿಮುಕ್ತಿ ಬಣಕಲ್ ಮಹಿಳೆಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ವಿಮುಕ್ತಿ, ಬಣಕಲ್‍ನ ನಿರ್ದೇಶಕರಾದ ವಂ. ವಿನ್ಸೆಂಟ್ ಡಿ ಸೋಜಾ ಮಾತನಾಡಿ, ಸಮಾಜದಲ್ಲಿ ಪ್ರಗತಿಯಾಗಬೇಕಾದರೆ ಮಹಿಳೆಯರ ಪಾತ್ರವನ್ನು ಸಮರ್ಪಕವಾಗಿ ನಿರೂಪಿಸುವುದು ಅತಿ ಅಗತ್ಯ. ವಿಮುಕ್ತಿ ಬಣಕಲ್ 20 ವರ್ಷಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಂಡು ಸಾವಿರಾರು ಮಹಿಳೆಯರ ಆತ್ಮಾಭಿಮಾನದ ಬದುಕಿಗೆ ಪ್ರೇರಣೆಯಾಗಿದೆ ಎಂದರು.

ವಿಮುಕ್ತಿಯಾನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಬಣಕಲ್ ಪೊಲೀಸ್ ಠಾಣೆ ಪಿಎಸ್‍ಐ ಗಾಯತ್ರಿ ಅವರು ಮಾತನಾಡಿ ಸಮಾಜ ಹಾಗೂ ಕುಟುಂಬದಲ್ಲಿ ಮಹಿಳೆಯ ಪಾತ್ರ ಮಹತ್ವಪೂರ್ಣವಾಗಿದೆ. ಎಲ್ಲಾ ಕ್ರೇತ್ರಗಳಲ್ಲೂ ಮಹಿಳೆ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ ಎಂದರು.

ವಿಮುಕ್ತಿಯಾನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಕೃಪಾಲಯದ ಮುಖ್ಯಗುರುಗಳಾದ ವಂ. ರೋಕ್ಕಿ ಡಿ ಕುನ್ಹಾ, ಬಣಕಲ್ ಗ್ರಾ.ಪಂ ಅಧ್ಯಕ್ಷರಾದ ಲೀಲಾವತಿ, ಸದಸ್ಯರಾದ ಅತಿಕಾ ಬಾನು, ಸರೋಜ, ಬಣಕಲ್ ಚರ್ಚ್‍ನ ಧರ್ಮಗುರುಗಳಾದ ಫಾ. ಆಲ್ಬರ್ಟ್ ಡಿ ಸಿಲ್ವಾ, ನಜರೆತ್ ಶಾಲೆ ಪ್ರಾಂಶುಪಾಲರಾದ ಸಿಸ್ಟರ್ ಹಿಲ್ಡಾ ಲೋಬೊ, ಬೆಳ್ತಂಗಡಿ ವಿಮುಕ್ತಿಯ ನಿರ್ದೇಶಕರಾದ ವಂ. ವಿನೋದ್ ಮಸ್ಕರೇನ್ಹಸ್, ಶಿಕ್ಷಕರಾದ ಪ್ರೆಸೀಲಾ, ವಿಮುಕ್ತಿ ಬಣಕಲ್‍ನ ಒಕ್ಕೂಟದ ಅಧ್ಯಕ್ಷರಾದ ಯಶೋಧ, ಉಪಾಧ್ಯಕ್ಷರಾದ ದೇವಕಿ, ಕಾರ್ಯದರ್ಶಿ ಸುನಂದ, ಸಹ ಕಾರ್ಯದರ್ಶಿ ಸಾವಿತ್ರಿ, ಖಜಾಂಚಿ ಪಾರ್ವತಿ, ಸದಸ್ಯರಾದ ಭಾರತಿ, ಅಶ್ವಿನಿ, ಆರತಿ, ಚೈತ್ರಾ, ಲೀಲಾವತಿ, ಸರೋಜ, ಸುಶೀಲ, ಸಿಬ್ಬಂದಿಗಳಾದ ವಿಂದ್ಯಾ ಮುಂತಾದವರು ಇದ್ದರು.