ಚಿಕ್ಕೋಡಿ : ಬೇರೆಯವರ ಪರವಾಗಿ ಪರೀಕ್ಷೆ ಬರೆಯಲು ಬಂದಿದ್ದ ಆರು ನಕಲಿ ವಿದ್ಯಾರ್ಥಿಗಳನ್ನು ನಗರದ ಚಿಕ್ಕೋಡಿ ಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಐವರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಹುಲ್ ಕಿಳ್ಳಿಕೇತರ, ಭೀಮಶಿ ಹುಲಕುಂದ, ಕಾರ್ತಿಕ್ ಲಚ್ಚಪ್ಪ ಕುಂಬಾರ್, ಸಿದ್ದು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ ಮತ್ತು ಸವೀತಾ ಮಾದೇವ ಹೊಸೂರು ಸಿಕ್ಕಿ ಬಿದ್ದ ನಕಲಿ ವಿದ್ಯಾರ್ಥಿಗಳು.
ಈ ಆರು ಜನ ವಿದ್ಯಾರ್ಥಿಗಳು ಬೇರೆಯವರ ಬದಲಾಗಿ ಪರೀಕ್ಷೆ ಬರೆಯಲು ಬಂದಿದ್ದರು. ಹಾಲ್ ಟಿಕೆಟ್ ಪರಿಶೀಲನೆ ನಡೆಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.










