ಶಿವಸೇನಾ ಸಂಸದ ಸಂಜಯ್ ರಾವತ್‍ಗೆ ಇಡಿ ಶಾಕ್…

63
firstsuddi

ಮುಂಬೈ : 1,034 ಕೋಟಿ ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶಿವಸೇನಾ ನಾಯಕ, ಸಂಸದ ಸಂಜಯ್ ರಾವತ್ ಅವರ ಆಸ್ತಿಯನ್ನು ಜಪ್ತಿ ಮಾಡಿದೆ.

ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ರೂ. 9 ಕೋಟಿ ಮೌಲ್ಯದ ಭೂಮಿ ಮತ್ತು ದಾದರ್ ಉಪನಗರದಲ್ಲಿರುವ ರೂ. 2 ಕೋಟಿ ಮೌಲ್ಯದ ಫ್ಲ್ಯಾಟ್ ಜಪ್ತಿ ಮಾಡಿದೆ. ಕೇಂದ್ರ ಹಣಕಾಸು ತನಿಖಾ ಸಂಸ್ಥೆಯು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಜಮೀನು ಮತ್ತು ಫ್ಲಾಟ್ ಗಳನ್ನು ಫ್ರೀಜ್ ಮಾಡಲು ಅನುಮತಿಯನ್ನು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲಿ, ನನ್ನನ್ನು ಶೂಟ್ ಮಾಡಲಿ ಅಥವಾ ಜೈಲಿಗೆ ಕಳುಹಿಸಲಿ. ಇದಕ್ಕೆ ನಾನು ಹೆದರುವುದಿಲ್ಲ ಎಂದಿದ್ದಾರೆ.