ಎಸ್‌ಎಸ್‌ಕೆ ಸಮಾಜದ ಹೆಣ್ಣು ಮಕ್ಕಳು ಮುಸ್ಲಿಮರನ್ನು ಮದುವೆಯಾದ್ರೆ ಅಂತಹ ಕುಟುಂಬವನ್ನು ಬಹಿಷ್ಕರಿಸಿ : ನಾಗೇಶ್.

60
firstsuddi

ಹುಬ್ಬಳ್ಳಿ : ಎಸ್‌ಎಸ್‌ಕೆ ಸಮಾಜದ ಹೆಣ್ಣು ಮಕ್ಕಳು ಮುಸ್ಲಿಂ ಯುವಕರನ್ನು ಮದುವೆಯಾದರೇ ಅಂತಹ ಕುಟುಂಬವನ್ನು ಬಹಿಷ್ಕರಿಸಿ ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು ಎಸ್.ಎಸ್.ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಎಸ್‌ಎಸ್‌ಕೆ ಸಮಾಜದ ಯುವತಿಯೊಬ್ಬರು ಮುಸ್ಲಿಂ ಯುವಕನೊಂದಿಗೆ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದರು. ಲವ್ ಜಿಹಾದ್ ಎಂದು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಯುವತಿ ತಾನೇ ಇಷ್ಟಪಟ್ಟು ಮದುವೆಯಾಗಿರುವುದಾಗಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಳು. ಅಲ್ಲದೇ ಪೊಲೀಸರು ಗೋವಾದಿಂದ ಯುವತಿಯನ್ನು ಕರೆತಂದರೂ ಕೂಡ ಪಾಲಕರ ಬಳಿಗೆ ಹೋಗಲು ಆಕೆ ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಸಮಾಜದ ಹಿತದೃಷ್ಟಿಯಿಂದ ಅವರನ್ನು ಬಹಿಷ್ಕರಿಸಿ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಎಸ್‌ಎಸ್‌ಕೆ ಸಮಾಜದ ಹೆಣ್ಣು ಮಕ್ಕಳು ಮುಸ್ಲಿಂ ಯುವಕರನ್ನು ಮದುವೆಯಾದರೇ ಅಂತಹ ಕುಟುಂಬವನ್ನು ಸಮಾಜದಿಂದ ಹೊರಗೆ ಇಡುವುದು, ಯಾವುದೇ ದೇವಸ್ಥಾನಗಳಿಗೆ ಪ್ರವೇಶ ನೀಡುವಂತಿಲ್ಲ. ಅಲ್ಲದೇ ಯಾರೂ ಕೂಡ ಆ ಕುಟುಂಬಕ್ಕೆ ಹೆಣ್ಣನ್ನು ಕೊಡಬಾರದು ಎಂದು ಪತ್ರದಲ್ಲಿ ಬರೆಯಲಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.