ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ ಆಗುತ್ತಿರುವ ಹಿನ್ನಲೆ ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ದಕ್ಷಿಣ ಕೊರಿಯಾ, ಜಪಾನ್, ಥೈಲ್ಯಾಂಡ್, ಆಸ್ಟ್ರೇಲಿಯಾ, ವಿಯೆಟ್ನಾಂ, ನ್ಯೂಜಿಲೆಂಡ್ ನಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಳವಾಗುತ್ತಿರುವುದು ವರದಿಯಾಗಿದ್ದು, ಭಾರತಕ್ಕೆ ಬರೋ ವಿದೇಶಿಗರ ಮೇಲೆ ಕಣ್ಣಿಡಲಾಗಿದೆ. ಪ್ರಮುಖವಾಗಿ ಜಪಾನ್ ಹಾಗೂ ಥೈಲ್ಯಾಂಡ್ ನಿಂದ ಬರುವ ಪ್ರಯಾಣಿಕರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಹೊಸ ಮಾರ್ಗಸೂಚಿಗಳೇನು?
1. ಜಪಾನ್, ಥೈಲ್ಯಾಂಡ್ ಇಂದ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ.
2. ಕೋವಿಡ್ ಲಕ್ಷಣಗಳಿರುವ ಪ್ರಯಾಣಿಕರ ಸ್ಯಾಂಪಲ್ ಏರ್ ಪೋರ್ಟ್ ಲ್ಯಾಬ್ ನಲ್ಲೇ ಪರೀಕ್ಷೆ ಮಾಡುವುದು.
3. ಪಾಸಿಟಿವ್ ಬಂದರೆ ಜೀನೋಮ್ ಸೀಕ್ವೆನ್ಸಿಂಗ್ ಕಳಿಸುವುದು.
4. ಜಪಾನ್, ಥೈಲ್ಯಾಂಡ್ ಇಂದ ಬರುವ ಪ್ರಯಾಣಿಕರನ್ನ 14 ದಿನಗಳ ಕಾಲ ಟೆಲಿ ಮಾನಿಟರಿಂಗ್ ಮಾಡುವುದು ಕಡ್ಡಾಯ.










