ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಯ್ತು ಶಿವಲಿಂಗ.

51
firstsuddi

ಲಕ್ನೋ : ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯ ವೀಡಿಯೋ ಚಿತ್ರೀಕರಣವು ಪೂರ್ಣಗೊಂಡಿದ್ದು, ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು ಹೇಳಿದ್ದಾಗಿ ವರದಿಯಾಗಿದೆ.

ಮಸೀದಿ ಒಳಗಿನ ಬಾವಿಯೊಳಗೆ ಶಿವಲಿಂಗವೊಂದು ಪತ್ತೆಯಾಗಿದೆ. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ. ಈ ಶಿವಲಿಂಗವು ನಂದಿಯನ್ನು ಎದುರಿಸುತ್ತಿರುವ ರೂಪದಲ್ಲಿದೆ ಎಂದು ಹಿಂದೂ ಪರ ವಕೀಲರಾದ ಮದನ್ ಮೋಹನ್ ಯಾದವ್ ಮತ್ತು ವಿಷ್ಣು ಜೈನ್ ಹೇಳಿದ್ದಾರೆ.

ಸುಮಾರು 65 ರಷ್ಟು ಸರ್ವೇ ಕಾರ್ಯವು ಭಾನುವಾರ(ನಿನ್ನೆ)ವೇ ನಡೆದಿದೆ. ಇಂದು ಸಮೀಕ್ಷೆ ಪೂರ್ಣಗೊಂಡಿದ್ದು, ನಾಳೆ ಕೋರ್ಟ್ ಗೆ ಸಮೀಕ್ಷೆಯ ವರದಿ ಸಲ್ಲಿಸಲಾಗುತ್ತದೆ.