ವಂಚನೆ, ಜೀವ ಬೆದರಿಕೆ – ಪತಿ, ಮಾವನ ವಿರುದ್ಧ ದೂರು ದಾಖಲಿಸಿದ ನಟಿ ಚೈತ್ರಾ ಹಳ್ಳಿಕೇರಿ.

94
firstsuddi

ಮೈಸೂರು : ಪತಿ ಮತ್ತು ಮಾವನ ವಿರುದ್ಧ ನಟಿ ಚೈತ್ರಾ ಹಳ್ಳಿಕೇರಿ ಅವರು ಜಿಲ್ಲೆಯ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.

ತನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡು ಪತಿ ಬಾಲಾಜಿ, ಮಾವ ಪೋತರಾಜ್ ಗೋಲ್ಡ್ ಲೋನ್ ಪಡೆದಿದ್ದಾರೆ. ಇದರಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡಾ ಶಾಮೀಲಾಗಿದ್ದಾರೆ. ನನಗೆ ವಂಚನೆ ಮಾಡಿ ಜೀವಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ.