ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ದರ 30ರೂ.ಹೆಚ್ಚಳ…

43
firstsuddi

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀ.ಗೆ 30ರೂ. ಹೆಚ್ಚಳವಾಗಿದೆ. ಒಂದು ಲೀ.ಗೆ ಪೆಟ್ರೋಲ್ ಬೆಲೆ 129.86 ರೂ. ಹಾಗೂ ಡೀಸೆಲ್ ಬೆಲೆ 178.15ರೂ. ಏರಿಕೆ ಆಗಿದೆ. ಇದರ ಜೊತೆಗೆ ಸೀಮೆಎಣ್ಣೆ ಕೂಡ 30 ರೂ. ಏರಿಕೆಯಾಗಿದ್ದು, ಲೀಟರ್ ಗೆ 155.56 ರೂ.ಗೆ ಹೆಚ್ಚಳವಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಲೀಟರ್ ಗೆ 30 ರೂ.ಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ಹೆಚ್ಚಳವು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಹೇಳಿದ್ದರು.

ಸರ್ಕಾರಕ್ಕೆ ಬೆಲೆ ಏರಿಕೆ ಬಿಟ್ಟು ಬೇರೆ ದಾರಿಯಿಲ್ಲ. ಹೊಸ ಬೆಲೆಯ ಅಡಿಯಲ್ಲಿ, ನಾವು ಇನ್ನೂ ಡೀಸೆಲ್ ಮೇಲೆ ಲೀಟರ್ ಗೆ 56 ರೂ. ನಷ್ಟವನ್ನು ಅನುಭವಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕಾರ್ಯಕ್ರಮದ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು.