ಶೀಘ್ರದಲ್ಲೇ ಬರಲಿದೆ 5ಜಿ – 4ಜಿಗಿಂತ ಸುಮಾರು 10 ಪಟ್ಟು ವೇಗ…

66
firstsuddi

ನವದೆಹಲಿ : ಅತಿ ವೇಗದ ಇಂಟರ್ನೆಟ್ ಸೇವೆಗಾಗಿ ದೇಶದಲ್ಲಿ 5ಜಿ ತರಂಗಾಂತರ ಹರಾಜಿಗೆ ಕೇಂದ್ರ ಸಂಪುಟ ಅನುಮತಿ ನೀಡಿದೆ. 5ಜಿ ಸೇವೆಗಳ ಲಭ್ಯತೆಯ ಬಳಿಕ ಇಂಟರ್ನೆಟ್ ಸೇವೆಗಳು ಈಗಿರುವ 4ಜಿ ವೇಗಕ್ಕಿಂತಲೂ 10 ಪಟ್ಟು ಹೆಚ್ಚಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಸ್ಪೆಕ್ಟ್ರಮ್ ಹರಾಜು ನಡೆಸಲು ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿದೆ, ಅದರ ಮೂಲಕ ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ 5ಜಿ ಸೇವೆಗಳನ್ನು ಒದಗಿಸಲು ಯಶಸ್ವಿ ಸ್ಪೆಕ್ಟ್ರಮ್ ಅನ್ನು ನಿಯೋಜಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72097.85 MHz ಸ್ಪೆಕ್ಟ್ರಮ್ ಅನ್ನು ಜುಲೈ, 2022 ರ ಅಂತ್ಯದ ವೇಳೆಗೆ ಹರಾಜಿಗೆ ಹಾಕಲಾಗುತ್ತದೆ. ವಿವಿಧ ಕಡಿಮೆ (600 MHz, 700 MHz, 800 MHz), ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಯಲಿದೆ. (900 MHz, 1800 MHz, 2100 MHz, 2300 MHz), ಮಿಡ್ (3300 MHz) ಮತ್ತು ಹೆಚ್ಚಿನ (26 GHz) ಆವರ್ತನ ಬ್ಯಾಂಡ್‌ಗಳು ಇರಲಿವೆ.

ಟೆಲಿಕಾಂ ಹರಾಜಿನಲ್ಲಿ ಮುಂಗಡ ಪಾವತಿಯನ್ನು ಭರಿಸುವುದನ್ನು ಕೈಬಿಡಲಾಗಿದೆ. ಸ್ಪೆಕ್ಟ್ರಮ್ ಹರಾಜನ್ನು ಗೆದ್ದ ಬಿಡ್ಡರ್ ಮುಂಗಡವಾಗಿ ಹಣವನ್ನು ಪಾವತಿಸಬೇಕಾಗಿಲ್ಲ. ಬಿಡ್ಡಿನ ಒಟ್ಟಾರೆ ಹಣವನ್ನು 20 ಕಂತುಗಳಲ್ಲಿ ಕಟ್ಟಬೇಕು. ಪ್ರತಿ ಕಂತನ್ನು ವರ್ಷದ ಆರಂಭದಲ್ಲಿಯೇ ಪಾವತಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೇ 10 ವರ್ಷಗಳ ಬಳಿಕ ಸ್ಪೆಕ್ಟ್ರಮ್ ಅನ್ನು ಬಿಡ್ ದಾರ ವಾಪಸ್ ಸರ್ಕಾರಕ್ಕೆ ಹಸ್ತಾಂತರಿಸುವ ಅವಕಾಶವನ್ನೂ ನೀಡಲಾಗಿದೆ. ವಾಪಸ್ ಬಳಿಕ ಬಾಕಿ ಉಳಿದ ಕಂತುಗಳನ್ನು ಪಾವತಿಸುವ ಅಗತ್ಯವಿಲ್ಲ.