ಸರ್ಕಾರಿ ಶಾಲೆ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.

66
firstsuddi

ಬೆಂಗಳೂರು : ರಾಜ್ಯ ಸರ್ಕಾರ ಸರ್ಕಾರಿ ಶಾಲೆ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ಶಾಲೆಗಳಿಗೆ ಸ್ಕೂಲ್ ಬಸ್ ವ್ಯವಸ್ಥೆಗೆ ಅನುಮತಿ ನೀಡಿದೆ.

ಸರ್ಕಾರಿ ಶಾಲೆಗಳಿಗೆ ಮಾತ್ರ ಶಾಲಾ-ವಾಹನವನ್ನು ಮಕ್ಕಳನ್ನು ಕರೆತರುವ ಅನುಮತಿ ನೀಡಲಾಗಿದೆ. ಯಾವ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇರಲ್ಲವೋ ಅಲ್ಲಿಯ ಶಾಲೆಗಳು ಮಾತ್ರ ಬಸ್ ಖರೀದಿಸಬಹುದಾಗಿದೆ.

ಶಾಲಾ- ವಾಹನ ಖರೀದಿಸಲು ತಗಲುವ ವೆಚ್ಚವನ್ನು ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಭರಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ಚಾಲಕರ ವೇತನ, ಡೀಸೆಲ್ ಖರೀದಿಗೆ ಈ ಹಣ ಬಳಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.