ಬೆಂಗಳೂರು : ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದೇ ದಿನ ದಾಖಲೆಯ ಮೂರು ಸಾವಿರಕ್ಕೂ ಅಧಿಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ಪಿಎಸ್ ಐನಿಂದ ಹಿಡಿದು ಕಾನ್ಸ್ ಟೇಬಲ್ ವರೆಗೂ ವರ್ಗಾವಣೆ ಮಾಡಿ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ. ಐದು ವರ್ಷ ಒಂದೇ ಠಾಣೆಯಲ್ಲಿದ್ದವರಿಗೆ ವರ್ಗಾವಣೆ ಮಾಡಲಾಗಿದೆ.
1,749 ಕಾನ್ಸ್ ಟೇಬಲ್, 1,292 ಹೆಡ್ ಕಾನ್ಸ್ ಟೇಬಲ್, 43 ಎಎಸ್ ಐ ಹಾಗೂ 163 ಪಿಎಸ್ ಐಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಮಟ್ಟದ ವರ್ಗಾವಣೆ ಇಲಾಖೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಯಾಗಿದೆ ಎಂದು ಹೇಳಲಾಗಿದೆ.










