ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿರುವ ಬೋರಿಸ್ ಜಾನ್ಸನ್.

50
firstsuddi

ಲಂಡನ್ : ಪ್ರಧಾನ ಮಂತ್ರಿ ಹುದ್ದೆಗೆ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಬೋರಿಸ್ ಸಂಪುಟದಿಂದ ಈಗಾಗಲೇ 40ಕ್ಕೂ ಹೆಚ್ಚು ಸಚಿವರು ಹುದ್ದೆಯನ್ನು ತ್ಯಜಿಸಿದ್ದು, ಅವರಿಗೂ ಪ್ರಧಾನಿ ಹುದ್ದೆ ತ್ಯಜಿಸುವಂತೆ ಸೂಚಿಸಿದ ನಂತರ ಬೋರಿಸ್ ಜಾನ್ಸನ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ ನ ಸಹ-ಸಂಸ್ಥಾಪಕರಾದ ನಾರಾಯಣಮೂರ್ತಿ ಅವರ ಅಳಿಯ, ಬ್ರಿಟನ್ ಸರ್ಕಾರದ ಹಣಕಾಸು ಸಚಿವ ರಿಷಿ ಸುನಕ್ ಮತ್ತು ಇನ್ನೋರ್ವ ಸಚಿವ (ಆರೋಗ್ಯ ಕಾರ್ಯದರ್ಶಿ) ಸಾಜಿದ್ ಜಾವಿದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಪ್ರಧಾನಿ ಕೂಡ ರಾಜೀನಾಮೆ ಘೋಷಣೆ ಮಾಡಲು ಸಿದ್ಧರಾಗಿದ್ದಾರೆಂದು ವರದಿಯಾಗಿದೆ. ಇನ್ನೂ ಲಂಡನ್ ಸಂಸತ್ ಗೆ ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಕಾರಣ ಅಲ್ಲಿಯವರೆಗೆ ಜಾನ್ಸನ್ ಬ್ರಿಟನ್ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಹಲವು ಹಗರಣಗಳು ಕೇಳಿಬಂದಿವೆ. ಅಲ್ಲದೇ, ಕೊರೊನಾ ತುರ್ತು ಸಮಯದಲ್ಲಿ ಗಾಂಭೀರ್ಯತೆ ಕಾಪಾಡಬೇಕಾಗಿದ್ದ ಪ್ರಧಾನಿಯೇ ಪಾರ್ಟಿ ಏರ್ಪಡಿಸಿ ಜಲ್ಸಾ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು.