ಬಾಲಕನಿಗೆ ಕಪಾಳ ಮೋಕ್ಷ ಮಾಡಿದ ಪಾಕಿಸ್ತಾನ ಪತ್ರಕರ್ತೆ!

135
firstsuddi

ಇಸ್ಲಾಮಾಬಾದ್ : ಸುದ್ದಿಯನ್ನು ನೇರಪ್ರಸಾರದಲ್ಲಿ ವರದಿ ಮಾಡುತ್ತಿದ್ದಾಗ ಮಹಿಳಾ ಪತ್ರಕರ್ತೆಯೊಬ್ಬರು ಬಾಲಕನ ಕೆನ್ನೆಗೆ ಬಾರಿಸಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಜುಲೈ 9 ರಂದು ರಂಜಾನ್ ಹಬ್ಬ ಕುರಿತು ಪತ್ರಕರ್ತೆ ವರದಿ ಮಾಡುತ್ತಿದ್ದರು. ಆಗ ಅಲ್ಲೇ ಇದ್ದ ಬಾಲಕ ವರದಿಗೆ ಅಡ್ಡಿ ಮಾಡಿದ್ದಾನೆ. ಆಗ ಕೋಪಗೊಂಡ ಪತ್ರಕರ್ತೆ ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಬಾಲಕ ಮಾಡಿದ್ದೇನು..?
ಪತ್ರಕರ್ತೆ ರಂಜಾನ್ ಹಬ್ಬ ಕುರಿತು ವರದಿ ಮಾಡುತ್ತಿರುವಾಗ, ಅಲ್ಲೇ ನಿಂತಿದ್ದ ಬಾಲಕನೊಬ್ಬ ಅಡ್ಡಿಮಾಡಿದ್ದಾನೆ. ಪತ್ರಕರ್ತೆ ಲೈವ್ ಕೊಡುತ್ತಿದ್ದ ಕ್ಯಾಮರಾಗೆ ಯಾವುದು ವಸ್ತುವನ್ನು ಅಡ್ಡ ಹಿಡಿದಿದ್ದಾನೆ. ಅಲ್ಲದೇ ಸುಮ್ಮನೆ ಏನೇನು ಹೇಳಿಕೆಗಳನ್ನು ನೀಡ್ತಾ ಇದ್ನಂತೆ. ಅದಕ್ಕೆ ತಾಳ್ಮೆ ಕಳೆದುಕೊಂಡ ವರದಿಗಾರ್ತಿ, ತನ್ನ ವರದಿ ಮುಗಿಯುತ್ತಿದ್ದಂತೆ ಆ ಬಾಲಕನ ಕೆನ್ನೆಗೆ ಬಾರಿಸಿದ್ದಾರೆ.