ಹೊರಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ…

94
firstsuddi

ಚಿಕ್ಕಮಗಳೂರು : ಮೆಸ್ಕಾಂ ಇಲಾಖೆಯ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಕಾರ್ಮಿಕರಿಗೆ ದಿನಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಕೆಇಬಿ ಕಚೇರಿಯಿಂದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಜಿಲ್ಲಾ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾರ್ಮಿಕ ಇಬ್ರಾಹಿಂಖಾನ್ ಸುಮಾರು 20-25 ವರ್ಷಗಳಿಂದ ಹೊರಗುತ್ತಿಗೆಯಲ್ಲಿ ಅನೇಕ ಮೆಸ್ಕಾಂ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಗೆ ಸಂಬಳ ಹಾಗೂ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ಸೂಕ್ತ ದಿನಭತ್ಯೆಯಲ್ಲಿ 100 ರೂ. ಹೆಚ್ಚಳ ಹಾಗೂ ನಿಗಧಿತ ಸಮಯಾವಕಾಶವನ್ನು ಕಾರ್ಮಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಕಾರ್ಮಿಕರಿಗೆ 700 ರೂ. ದಿನಭತ್ಯೆ ನೀಡಲಾಗುತ್ತಿದೆ. ಆದರೆ ಕೆಲಸದ ಅವಧಿ ಬೆಳಿಗ್ಗೆ 8 ರಿಂದ ಸಂಜೆ 8 ಅಥವಾ 10 ಗಂಟೆತನಕ ಆಗಬಹುದಾಗಿದೆ. ಇದರಿಂದ ಇಲಾಖೆಯಿಂದ ನೀಡುತ್ತಿರುವ ಸಂಬಳ ಸಾಲದಾಗಿರುವುದರಿಂದ ಕಾರ್ಮಿಕರ ಜೀವನ ವೃದ್ದಿಸಲು ಕನಿಷ್ಟ ರೂ.100 ರೂ.ಗಳ ದಿನಭತ್ಯೆಯನ್ನು ಹೆಚ್ಚಳಗೊಳಿಸಬೇಕು ಎಂದು ಆಗ್ರಹಿಸಿದರು.

ಮೆಸ್ಕಾಂ ಹೊರಗುತ್ತಿಗೆಯಲ್ಲಿ ಸುಮಾರು ವರ್ಷಗಳಿಂದ ಅನೇಕ ಮಂದಿ ದುಡಿಯುತ್ತಿದ್ದಾರೆ. ಅಂತಹವರಿಗೆ ಆರೋಗ್ಯ ಸಮಸ್ಯೆ ಎದುರಾದಲ್ಲಿ ಸೂಕ್ತ ಭದ್ರತೆಯನ್ನು ಮೆಸ್ಕಾಂ ಇಲಾಖೆಯಿಂದ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೊರಗುತ್ತಿಗೆ ಕಾರ್ಮಿಕರಾದ ಸೋಮೇಗೌಡ, ಮೋಹನ್, ನಾಗಣ್ಣ, ಸಲೀಂ, ಪ್ರವೀಣ್, ಜಾನಿ, ಕುಮಾರ್, ರುದ್ರೇಶ್, ವಿವೇಕ್, ಜಗದೀಶ್, ಕುಲ್‍ಶಾನ್ ಮತ್ತಿತರರು ಹಾಜರಿದ್ದರು.