ರಾಜಕೀಯ ತ್ಯಜಿಸುವ ಬಗ್ಗೆ ಬಹಳಷ್ಟು ಬಾರಿ ಯೋಚಿಸಿದ್ದೆ : ನಿತಿನ್ ಗಡ್ಕರಿ.

75
firstsuddi

ಮುಂಬೈ : ನನಗೆ ಆಗಾಗ್ಗೆ ರಾಜಕೀಯ ತೊರೆಯಬೇಕು ಅನ್ನಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಗಾಂಧಿ ಅವರ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಆಗಾಗ ರಾಜಕೀಯ ತೊರೆಯಬೇಕು ಅನ್ನಿಸುತ್ತದೆ. ಬಹಳಷ್ಟು ಬಾರಿ ಈ ಬಗ್ಗೆ ಯೋಚಿಸಿದ್ದೇನೆ. ಏಕೆಂದರೆ ರಾಜಕೀಯಕ್ಕಿಂತ ಜೀವನದಲ್ಲಿ ಹೆಚ್ಚಿನದ್ದನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.

ರಾಜಕೀಯವು ಸಾಮಾಜಿಕ ಬದಲಾವಣೆ ತರುವ ಅಸ್ತ್ರ ಎಂಬುದು ನನ್ನ ನಂಬಿಕೆ. ಆದರೆ ರಾಜಕೀಯಕ್ಕೆ ಬಂದ ಮೇಲೆ ಅಧಿಕಾರವನ್ನೇ ಹೆಚ್ಚಾಗಿ ಹುಡುಕುತ್ತೇವೆ. ಇಂದು ನಾವು ರಾಜಕೀಯವೆಂದರೆ ಅಧಿಕಾರ ಎಂದೇ ನೋಡುತ್ತಿದ್ದೇವೆ. ಸಾಮಾಜಿಕ- ಆರ್ಥಿಕವಾಗಿ ಅಭಿವೃದ್ಧಿ ತರಲಿರುವ ಉಪಕರಣವಾಗಿದೆ ರಾಜಕೀಯ. ಆದ್ದರಿಂದಲೇ ಇಂದಿನ ರಾಜಕಾರಣಿಗಳು ಸಮಾಜದಲ್ಲಿ ಶಿಕ್ಷಣ, ಕಲೆ ಮೊದಲಾದವುಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದ್ದಾರೆ.