ಆಷಾಢ ಮಾಸ: ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಯಲ್ಲಿ 2.33 ಕೋಟಿ ರೂ. ಸಂಗ್ರಹ…

136
firstsuddi

ಮೈಸೂರು : ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಯಲ್ಲಿ 2,33,51,270(ಎರಡು ಕೋಟಿ ಮೂವತ್ತೂರು ಲಕ್ಷದ ಐವತ್ತೊಂದು ಸಾವಿರದ ಎರಡು ನೂರ ಎಪ್ಪತ್ತು) ರೂ. ಕಾಣಿಕೆ ಸಂಗ್ರಹವಾಗಿದೆ.

ಈ ಬಾರಿ ಆಷಾಢ ಮಾಸದಲ್ಲಿ ನಾಡದೇವತೆಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರು. 2,33,51,270 ರೂ.ಗಳಲ್ಲಿ 2,29,93,739 ರೂ. ನೋಟುಗಳು, 3,57,531 ರೂ. ನಾಣ್ಯಗಳು, 270 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಇದರ ಜೊತೆಗೆ 1,03,69,270 ರೂಪಾಯಿ ಪ್ರವೇಶ ಟಿಕೆಟ್​ನಿಂದ ಸಂಗ್ರಹವಾಗಿದೆ.