ಹಂತಕರ ಬಂಧನಕ್ಕೆ ಕೇರಳ ಪೊಲೀಸರ ನೆರವು : ಆರಗ ಜ್ಞಾನೇಂದ್ರ.

57
firstsuddi

ಬೆಂಗಳೂರು : ಮತಾಂಧ ಸಂಘಟನೆಗಳ ಮೇಲೆ ನಮಗೆ ಅನುಮಾನವಿದೆ, ಹಂತಕರ ಬಂಧನಕ್ಕೆ ಕೇರಳ ಪೊಲೀಸರ ನೆರವು ಕೇಳಿದ್ದೇವೆ, ಕರಾವಳಿಯ ಗಡಿಭಾಗ ಕೇರಳದಿಂದ ಬಂದು ಕೊಲೆಗಡುಕರು ಕುಕೃತ್ಯ ಎಸಗುವ ಘಟನೆ ಹಲವು ಬಾರಿ ನಡೆದಿದೆ. ಜಂಟಿ ಕಾರ್ಯಾಚರಣೆಯಿಂದ ಮಟ್ಟಹಾಕಲು ಸಾಧ್ಯವಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಈಗಾಗಲೇ 15 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. ಸಿಎಂ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ. ಮಂಗಳೂರು ವಾತಾವರಣ ಶಾಂತವಾಗಿದೆ. ಪೊಲೀಸರ ಭದ್ರತೆ ಮುಂದುವರಿಯಲಿದೆ. ನಾನು ಮಂಗಳೂರಿಗೆ ಹೋಗ್ತೀನಿ. ಶೀಘ್ರವೇ ಈ ಬಗ್ಗೆ ನಿರ್ಧಾರ ಮಾಡ್ತೀವಿ. ಜನರ ಆಕ್ರೋಶ ಇರೋದು ನಿಜ. ಜನರ ಆಕ್ರೋಶ ಅರ್ಥ ಆಗುತ್ತೆ. ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ಮಾಡಿ ಕ್ರಮ ತಗೋತೀವಿ. ಮತಾಂಧ ಶಕ್ತಿಗಳ ಮೇಲೆ ಅನುಮಾನ ಇದೆ. ಅಂತಹ ಶಕ್ತಿಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ನಾವು ಅಸಹಾಕರಲ್ಲ, ನಮ್ಮ ಸರ್ಕಾರ ಅಸಹಾಯಕವಾಗಿಲ್ಲ, ನಾವು ಎಲ್ಲಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.